ಭಾನುವಾರ, ಸೆಪ್ಟೆಂಬರ್ 27, 2020
27 °C
ಜಿಮ್‌ ಮಾಲೀಕರಾದ ಗ್ಲೇನ್ ಡಯಾಸ್‌

ಸುರಕ್ಷತೆಗೆ ಆದ್ಯತೆ: ಸ್ಯಾನಿಟೈಸ್‌ಗೊಂಡು ಸಿದ್ಧವಾದ ಜಿಮ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಲಾಕ್‌ಡೌನ್ ಬಳಿಕ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬಾಗಿಲು ಮುಚ್ಚಿದ್ದ ಜಿಮ್‌, ಯೋಗಕೇಂದ್ರಗಳು ಬುಧವಾರದಿಂದ ಆರಂಭವಾಗುತ್ತಿವೆ. ಜಿಮ್‌ಗಳಿಗೆ ತೆರಳುವವರು ಮಾಸ್ಕ್‌, ಟವಲ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಕೊಂಡೊಯ್ಯುವಂತೆ ಸೂಚನೆ ನೀಡಲಾಗಿದೆ.

ಜಿಮ್‌ಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಅಂತರ ಕಾಯ್ದುಕೊಳ್ಳಲು ಜಿಮ್‌ ಉಪಕರಣಗಳನ್ನು 6 ಅಡಿ ಅಂತರದಲ್ಲಿ ಜೋಡಿಸಲಾಗಿದೆ. ಪ್ರತಿ ಬಾರಿ ಬಳಕೆಯ ಬಳಿಕ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಮ್‌ ಮಾಲೀಕರಾದ ಗ್ಲೇನ್ ಡಯಾಸ್ ಮಾಹಿತಿ ನೀಡಿದರು.

ಜಿಮ್‌ಗೆ ಬರುತ್ತಿದ್ದವರನ್ನು ಸಂಪರ್ಕಿಸಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ತಿಳಿಸಲಾಗಿದೆ. ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಜಿಮ್‌ಗಳಿದ್ದು, ಹೆಚ್ಚಿನ ಜಿಮ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಲಾಕ್‌ಡೌನ್‌ನಿಂದ ಜಿಮ್‌ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಈಗ ಜಿಮ್‌ಗಳ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ಪಲ್ಪ ನಿರಾಳ ತಂದರೂ ಉದ್ಯಮ ಚೇತರಿಸಿಕೊಳ್ಳಲು ತುಂಬಾ ಸಮಯಬೇಕಾಗಬಹುದು ಎಂದು ಗ್ಲೇನ್ ಡಯಾಸ್ ಅಭಿಪ್ರಾಯಪಟ್ಟರು.

ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯಿಂದ ನಡೆಯುತ್ತಿರುವ ಜಿಮ್‌ ಕೂಡ ಬುಧವಾರದಿಂದ ಆರಂಭವಾಗುತ್ತಿದ್ದು, ಬೆಳಿಗ್ಗೆ 5.30ರಿಂದ 9ರವರೆಗೆ ಸಂಜೆ 4ರಿಂದ 8ರವರೆಗೆ ತೆರೆದಿರಲಿದೆ. ಈಗಾಗಲೇ ಜಿಮ್‌ ಶುಚಿಗೊಳಿಸಲಾಗಿದ್ದು, ಪ್ರತಿದಿನ ಸ್ಯಾನಿಟೈಸ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರೋಶನ್‌ ಶೆಟ್ಟಿ ತಿಳಿಸಿದರು.

ಬೆಳಿಗ್ಗೆ 3, ಸಂಜೆ 4 ಬ್ಯಾಚ್‌ಗಳಲ್ಲಿ ಜಿಮ್‌ ನಡೆಯಲಿದೆ. ಹಲವರು ಈಗಾಗಲೇ ಸಂಪರ್ಕಿಸಿ ಜಿಮ್‌ಗೆ ಬರಲು ಉತ್ಸುಕತೆ ತೋರಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು