ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ | ಕೆಸರಿನಲ್ಲೊಂದು ದಿನ ಬದಲು ಬೇಸಾಯ ಮಾಡಿ: ನೀರೆ ಕೃಷ್ಣ ಶೆಟ್ಟಿ

ಎಸ್‌ಕೆಡಿಆರ್‌ಡಿಪಿ ಯಂತ್ರಶ್ರೀ ನಾಟಿ ಕಾರ್ಯಕ್ರಮ
Published 14 ಆಗಸ್ಟ್ 2024, 4:32 IST
Last Updated 14 ಆಗಸ್ಟ್ 2024, 4:32 IST
ಅಕ್ಷರ ಗಾತ್ರ

ಹೆಬ್ರಿ: ಹಿಂದಿನ ಕಾಲದಲ್ಲಿ ಗದ್ದೆಗಳನ್ನು ಬೇಸಾಯ ಮಾಡಿ ಕಡೆಯ ನಾಟಿ ದಿನದಂದು ರೈತರು ಸಂಭ್ರಮ ಪಡುತ್ತಿದ್ದರು. ಇಂದು ಬೇಸಾಯ ಮಾಡುವವರು ಕಡಿಮೆಯಾಗಿದ್ದಾರೆ. ಯುವ ಸಮುದಾಯ ರೈತರನ್ನು ಸೇರಿಸಿಕೊಂಡು ಕೆಸರಿನಲ್ಲೊಂದು ದಿನ ಎಂದು ಸಂಭ್ರಮ ಪಡುತ್ತಿದ್ದಾರೆ. ಅದು ಸರಿಯಲ್ಲ, ಎಲ್ಲರೂ ಸೇರಿ ಭತ್ತದ ಬೇಸಾಯ ಮಾಡಿ ಸಂಭ್ರಮಿಸಬೇಕು. ಇಲ್ಲದಿದ್ದರೆ ಮುಂದೆ ಅನ್ನಕ್ಕೆ ತತ್ವಾರ ಪಡುವ ದಿನ ದೂರ ಇಲ್ಲ ಎಂದು ಸಹಕಾರಿ ಧುರೀಣ, ತಾಲ್ಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಅವರು ಕೃಷಿಕ ಶಿವಪುರ ಎಲಿಕೊಡು ಭೋಜ ಶೆಟ್ಟಿ ಅವರ ಕೃಷಿ ಕ್ಷೇತ್ರದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೆಬ್ರಿ ತಾಲ್ಲೂಕು ಘಟಕದ ಯಂತ್ರಶ್ರೀ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಕ್ಷೇತ್ರದವರು ಕೃಷಿಗೆ ವಿಶೇಷ ಒತ್ತು ನೀಡುತ್ತಿರುವುದು ರೈತರಿಗೆ ಉತ್ತೇಜನ ನೀಡುತ್ತಿದೆ. ತಾಲ್ಲೂಕಿನಲ್ಲಿ ಈ ಬಾರಿ 1 ಸಾವಿರ ಎಕರೆ ಗದ್ದೆಯಲ್ಲಿ ಕೃಷಿ ಅಧಿಕಾರಿ ಉಮೇಶ್‌ ನೇತೃತ್ವದಲ್ಲಿ ಬೇಸಾಯ ಮಾಡಿರುವುದು ಅದ್ಭುತ ಸಾಧನೆ. ಕಾರ್ಯಕ್ರಮಕ್ಕೆ ಪಾಡ್ದನದ ಮೂಲಕ ಚಾಲನೆ ಕೊಟ್ಟಿರುವುದು ಈ ನೆಲದ ಶ್ರೀಮಂತ ಸಂಸ್ಕೃತಿ ಉಳಿಸುವತ್ತ ಮಹತ್ವದ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಕೆಡಿಆರ್‌ಡಿಪಿ ಕೇಂದ್ರ ಕಚೇರಿಯ ಕೃಷಿ ಯೋಜನಾಧಿಕಾರಿ ಸುಧೀರ್ ಜೈನ್‌ ಮಾತನಾಡಿ, ಭತ್ತದ ಬೆಳೆಗೆ ಅನೇಕ ಸಮಸ್ಯೆಗಳಿವೆ. ಕೆಲವು ವರ್ಷಗಳಿಂದ ಬೆಳೆ ಪರಿವರ್ತನೆ ನಡೆಯುತ್ತಿದೆ. ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಕಡಿಮೆ ದರದಲ್ಲಿ ಸಿಗುವ ಯೋಜನೆಯ ಸವಲತ್ತನ್ನು ಭತ್ತ ಕೃಷಿಗೆ ಅಳವಡಿಸಿಕೊಳ್ಳಿ ಎಂದದರು.

ಕೃಷಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬೊಗ್ಗಿ ಕುಲಾಲ್ ಪಾಡ್ದನದ ಮೂಲಕ ಚಾಲನೆ ನೀಡಿದರು. ವಿವಿಧ ರೀತಿಯ ಸಾಂಪ್ರದಾಯಿಕ ಶೈಲಿಯ ಊಟೋಪಚಾರ ನಡೆಯಿತು.

ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲಾಯ, ಹೆಬ್ರಿ ಯೋಜನಾಧಿಕಾರಿ ಲೀಲಾವತಿ, ವಿವಿಧ ಪ್ರಮುಖರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ ಪೂಜಾರಿ, ಮೋಹನ್ ದಾಸ್ ನಾಯಕ್, ಚಾರ ವಲಯ ಅಧ್ಯಕ್ಷೆ ಜ್ಯೋತಿ, ಕೃಷಿ ಮೇಲ್ವಿಚಾರಕ ಉಮೇಶ್, ಮೇಲ್ವಿಚಾರಕಿ ರೇವತಿ, ಕೃಷಿಕ ಭೋಜ ಶೆಟ್ಟಿ ಇದ್ದರು. ಕೃಷಿ ಮೇಲ್ವಿಚಾರಕ ಉಮೇಶ್ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT