ಮಂಗಳವಾರ, ಜುಲೈ 5, 2022
25 °C

ಕುಂದಾಪುರ: ಗೇಟ್‌ ಬಳಿ ಅಸೈನ್‌ಮೆಂಟ್ ಒಪ್ಪಿಸಿದ ಹಿಜಾಬ್ ವಿದ್ಯಾರ್ಥಿನಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ಹಿಜಾಬ್ ಧರಿಸಲು ಅನುಮತಿ ಕೋರಿ ತರಗತಿ ಪಾಠಗಳಿಂದ ದೂರ ಉಳಿದಿರುವ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಕಾಲೇಜಿನ ಗೇಟ್‌ನಲ್ಲಿಯೇ ಉಪನ್ಯಾಸಕರಿಗೆ ಅಸೈನ್‌ಮೆಂಟ್‌ ಒಪ್ಪಿಸಿದರು.

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆಂತರಿಕ ಅಂಕ ಪಡೆಯಬೇಕಾದರೆ ವರ್ಷಕ್ಕೆ 2 ಬಾರಿ ಅಸೈನ್‌ಮೆಂಟ್ ಒಪ್ಪಿಸಬೇಕು. ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ಇಲ್ಲವಾದ್ದರಿಂದ ನಾಲ್ವರು ವಿದ್ಯಾರ್ಥಿನಿಯರು ಮನೆಯಲ್ಲಿಯೇ ಅಸೈನ್‌ಮೆಂಟ್‌ ಸಿದ್ಧಪಡಿಸಿಕೊಂಡು ಬಂದು ಕಾಲೇಜು ಗೇಟ್‌ನಲ್ಲಿ ಉಪನ್ಯಾಸಕ ಉದಯ್‌ಕುಮಾರ್ ಶೆಟ್ಟಿ ಅವರಿಗೆ ಸಲ್ಲಿಸಿದರು.

ತರಗತಿ ವಂಚಿತ ವಿದ್ಯಾರ್ಥಿಗಳು ನಿತ್ಯವೂ ಪಾಠ ಯೋಜನೆಯ ವರದಿಗಳನ್ನು ಒಪ್ಪಿಸುತ್ತಿದ್ದಾರೆ ಎಂದು ಉಪನ್ಯಾಸಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು