ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ವೆಬ್‌ಸೈಟ್‌ ಲೋಕಾರ್ಪಣೆ

Last Updated 18 ಸೆಪ್ಟೆಂಬರ್ 2021, 15:41 IST
ಅಕ್ಷರ ಗಾತ್ರ

ಉಡುಪಿ: ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶನಿವಾರ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಕೊಂಡಾಡಿ ಕೊರಗ ಕಾಲೊನಿ ಸಂಘಟನೆಯ ಮಹಾಲಕ್ಷ್ಮಿ ಹಾಗೂ ಸುಬೇದಾ ವೆಬ್ ಸೈಟನ್ನು ಲೋಕಾರ್ಪಣೆ ಮಾಡಿದರು.

ಸರ್ಕಾರಿ ಕಾಲೇಜಿನಲ್ಲಿ ದಿನಗೂಲಿ ಸಿಬ್ಬಂದಿಯಾಗಿದ್ದು, ಸೇವೆ ಖಾಯಮಾತಿಗೆ ಹಾಗೂ ಬರಬೇಕಾಗಿದ್ದ ವೇತನಕ್ಕಾಗಿ ಸುಧೀರ್ಘ ಅವಧಿಯವರೆಗೂ ಕಾನೂನು ಹೋರಾಟ ಮಾಡಿ ಗೆಲುವು ಸಾಧಿಸಿದರ ಅಕ್ಕು ಶೇರಿಗಾರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್, ಅಕ್ಕು ಶೇರಿಗಾರ ಪ್ರಕರಣದ ತೀರ್ಪಿನಿಂದಾಗಿ, ಅವರಂತೆಯೇ ನ್ಯಾಯ ವಂಚಿತರಾಗಿದ್ದ 5000ಕ್ಕೂ ಹೆಚ್ಚು ಸಂತ್ರಸ್ಥರಿಗೆ ನ್ಯಾಯ ದೊರಕುವಂತಾಯಿತು ಎಂದರು.

ಅಕ್ಕು ಅವರಿಗೆ ಪ್ರತಿಷ್ಠಾನದಿಂದ ಸುಧೀರ್ಘ ಹೋರಾಟ ಮಾಡಿ ನ್ಯಾಯ ದೊರೆಯಿತು. ಆದರೆ ಅನ್ಯಾಯ ಎಸಗಿದ ಸರ್ಕಾರಿ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಬೇಜಾರಿದೆ. ಅಕ್ಕು ಅವರಿಗೆ ನೀಡಲಾದ ಪರಿಹಾರದ ಹಣವನ್ನು ತಪ್ಪಿಸತ್ಥ ಅಧಿಕಾರಿಗಳ ವೇತನ ಹಾಗೂ ಪಿಎಫ್‌ ಖಾತೆಯಿಂದ ಕಡಿತಗೊಳಿಸುವ ಶಿಕ್ಷೆ ನೀಡಬೇಕು ಎಂದು ಪ್ರತಿಷ್ಠಾನ ಹೋರಾಟ ಮುಂದುವರಿಸಿದೆ ಎಂದರು.

ಕೊಂಡಾಡಿ ಕೊರಗರ ಕಾಲೊನಿಯಲ್ಲಿ ಫಲಾನುಭವಿಗಳಿಗೆ ಸರ್ಕಾರದಿಂದ ನಿವೇಶನದ ಹಕ್ಕು ಪತ್ರಗಳನ್ನು ನೀಡಲಾಗಿದೆ. ಆದರೆ, ಫಲಾನುಭವಿಗಳಿಗೆ ಇದುವರೆಗೂ ಭೂಮಿ ಹಸ್ತಾಂತರವಾಗಿಲ್ಲ. ಮಂಜೂರಾದ ಭೂಮಿಯೂ ವಾಸ ಮಾಡಲು ಯೋಗ್ಯವಾಗಿಲ್ಲ. ಸಂತ್ರಸ್ಥರಿಗೆ ಭೂಮಿ ಹಾಗೂ ಕೊರಗಜ್ಜನ ಗುಡಿ ನಿರ್ಮಾಣವಾಗುವರೆಗೆ ಹೋರಾಟ ಮುಂದುವರಿಯಲಿದೆ ಎಂದರು ಡಾ.ರವೀಂದ್ರನಾಥ್ ಶಾನುಭಾಗ್ ಎಚ್ಚರಿಕೆ ನೀಡಿದರು.

ಈಗಾಗಲೇ ಪ್ರತಿಷ್ಠಾನದ ವೆಬ್‌ಸೈಟ್ ಚಾಲ್ತಿಯಲ್ಲಿದ್ದು, ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ.ನಿರ್ಮಲಾ ಕುಮಾರಿ, ವೆಬ್ ಸೈಟ್‌ ವಿನ್ಯಾಸಗಾರ ಸುಜಿತ್, ದಿನೇಶ್ ಪೂಜಾರಿ, ವಿಕ್ಟರ್, ಮೇರಿ ಡಿಸೋಜ, ಭೋಜ ಶೆಟ್ಟಿ ಇದ್ದರು. ಪ್ರತಿಷ್ಠಾನದ ಹರ್ಷಿತಾ ಮಂಗೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಪ್ರತ್ಯುಷಾ ಪ್ರಕಾಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT