ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯಕ್ಕಾಗಿ ಸರ್ವಸ್ವ ಕಳೆದುಕೊಂಡವರ ಸ್ಮರಣೆ ಅಗತ್ಯ’

Last Updated 10 ಆಗಸ್ಟ್ 2022, 16:29 IST
ಅಕ್ಷರ ಗಾತ್ರ

ಉಡುಪಿ: ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಹಿಂದೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸರ್ವಸ್ವವನ್ನು ಕಳೆದುಕೊಂಡು ಇಂದಿನ ಸಂಭ್ರಮಕ್ಕೆ ಕಾರಣಕರ್ತರಾಗಿರುವವರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಧರ್ಮಗುರು ಫಾದರ್‌ ವಿಲಿಯಮ್ ಮಾರ್ಟಿಸ್ ಹೇಳಿದರು.

ಬುಧವಾರ ಉಡುಪಿ ಶೋಕಮಾತಾ ಧರ್ಮಕೇಂದ್ರದ ಆವರಣದಲ್ಲಿ ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಹರ್‌ ಘರ್ ತಿರಂಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆ.13ರಿಂದ 15ರವರೆಗೆ ಪ್ರತಿ ಮನೆಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ಧ್ವಜದ ಮಹತ್ವ ತಿಳಿಸುವುದು ಅಗತ್ಯವಾಗಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಯಕರಾಗಿದ್ದು ಅವರಲ್ಲಿ ರಾಷ್ಟ್ರಪ್ರೇಮ ಸ್ಥಾಪಿತವಾದಾಗ ದೇಶ ಸುರಕ್ಷಿತ ಎಂದರು.

ಭಾರತ ಸೇವಾದಳ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಮಿತಿಯ ಕೋಶಾಧಿಕಾರಿ ಹೆರಾಲ್ಡ್ ಡಿಸೋಜ, ಸದಸ್ಯ ಬಿ.ಪುಂಡಲೀಕ ಮರಾಠೆ ಶಿರ್ವ, ಜಯಲಕ್ಷ್ಮೀ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬೋನಿಪಾಸ್ ಡಿಸೋಜ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಬಾಲಕೃಷ್ಣ, ಸೇವಾದಳ ಶಿಕ್ಷಕಿಯರಾದ ಜೆಸಿಂತಾ ಅಲ್ಮೇಡಾ, ವನಿತಾ ನಾಯಕ್, ಎಎಸ್‌ಐ ವಿಜಯ್, ಜಯಕರ್, ಚೇತನ್, ಶಿಕ್ಷಕರು ಇದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಯ್ಸ್ ಡೇಸಾ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮೇರಿ ಕ್ರಾಸ್ತಾ ವಂದಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರ ಗೌಡ ಹಳೆಮನಿ ಕಾರ್ಯಕಮ್ರ ಸಂಯೋಜಿಸಿದ್ದರು. ವಿದ್ಯಾರ್ಥಿಗಳು ನಗರ ಪಥ ಸಂಚಲನ ನಡೆಸಿ ದೇಶ ಭಕ್ತಿಗೀತೆ, ಜಯಘೋಷಣೆ ಮೊಳಗಿಸಿದರು.

ನಗರದ ಕೇಂದ್ರಭಾಗಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT