ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದಿರಾ ಹಾಲಂಬಿಗೆ ಅಕಲಂಕ ಪ್ರಶಸ್ತಿ

Published 13 ಜೂನ್ 2024, 14:44 IST
Last Updated 13 ಜೂನ್ 2024, 14:44 IST
ಅಕ್ಷರ ಗಾತ್ರ

ಬ್ರಹ್ಮಾವರ: ಡಾ.ಉಪ್ಪಂಗಳ ರಾಮ ಭಟ್‌ ಸ್ಥಾಪಿಸಿದ ಅಕಲಂಕ ಪ್ರಕಾಶನ, ಪ್ರತಿಷ್ಠಾನದ ಅಕಲಂಕ ಪ್ರಶಸ್ತಿಗೆ ಲೇಖಕಿ, ಪ್ರಕಾಶಕಿ ಇಂದಿರಾ ಹಾಲಂಬಿ ಆಯ್ಕೆಯಾಗಿದ್ದಾರೆ.

ಇದೇ 23ರಂದು ಸಂಜೆ 4ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ₹15 ಸಾವಿರ ನಗದು ಪುರಸ್ಕಾರ ಹೊಂದಿದೆ. 2015ರಲ್ಲಿ ಆರಂಭವಾದ ಪ್ರಶಸ್ತಿಯು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ನೀಡಿ, ಪರಿಷತ್ತಿನ ಮೂಲಕ ಕೊಡಮಾಡುವ ವ್ಯವಸ್ಥೆ ಡಾ.ಉಪ್ಪಂಗಳ ರಾಮ ಭಟ್‌ ಮಾಡಿದ್ದು, ಅವರ ಮರಣಾನಂತರ ಪತ್ನಿ ಶಂಕರಿ ಆರ್‌.ಭಟ್‌ ಮುಂದುವರಿಸಿದ್ದಾರೆ.

ಇಂದಿರಾ ಹಾಲಂಬಿ ಅವರು ‘ಗಿರಿವಾಸಿನಿ’ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ. 40 ವರ್ಷ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅವರು ಪ್ರಕಾಶನ, ಹಾಡು, ಕತೆ, ಲೇಖನ, ಮಕ್ಕಳ ಸಾಹಿತ್ಯ, ಚಿಂತನ, ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1980ರಲ್ಲಿ ಸಂದೀಪ ಸಾಹಿತ್ಯ ಹೆಸರಿನಲ್ಲಿ ಪುಸ್ತಕ ಪ್ರಕಟಣೆ ಆರಂಭಿಸಿದ್ದು, ಈ ತನಕ 138 ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT