ಶುಕ್ರವಾರ, ಡಿಸೆಂಬರ್ 2, 2022
20 °C

ಬೆಳ್ಮಣ್ಣು ಜೇಸಿಐಗೆ ವಲಯ ಶ್ರೇಷ್ಠ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ತಾಲ್ಲೂಕಿನ ನಿಟ್ಟೆಯಲ್ಲಿ ನಡೆದ ಜೇಸಿ ವಲಯ ಸಮ್ಮೇಳನ
ದಲ್ಲಿ ಸಾಂತೂರು ವೀಣೇಶ್ ಅಮೀನ್ ನೇತೃತ್ವದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ವಲಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತೀಯ ಜೇಸಿಐನ ವಲಯ 15ರ ನೇತೃತ್ವದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯದ ಅತ್ಯುತ್ತಮ ಪಬ್ಲಿಕ್ ರಿಲೇಷನ್‌ಷಿಪ್, ಅತ್ಯುತ್ತಮ ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಸ್ತಿ, ಸಿಲ್ವರ್ ಲೋಮ್, ರಕ್ತದಾನ ಶಿಬಿರದ ವಿಶೇಷ ಮನ್ನಣೆ, ತರಬೇತಿ ವಿಭಾಗದ ವಿಶೇಷ ಮನ್ನಣೆ, ಕಾರ್ಯಕ್ರಮ ವಿಭಾಗದ ವಿಶೇಷ ಮನ್ನಣೆ, ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದ ವಿಭಾಗ ದಲ್ಲಿ ಹಲವಾರು ವಿಶೇಷ ಮನ್ನಣೆ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತ ಅವರು ನೀಡಿ ಗೌರವಿಸಿದರು.

ಬೆಳ್ಮಣ್ ಜೇಸಿಐ ಘಟಕದ ಪೂರ್ವಾಧ್ಯಕ್ಷ ಸತೀಶ್ ಕೋಟ್ಯಾನ್, ಸರ್ವಜ್ಞ ತಂತ್ರಿ, ಸಂದೀಪ್ ವಿ. ಪೂಜಾರಿ, ರವಿರಾಜ್ ಶೆಟ್ಟಿ,
ಸತ್ಯನಾರಾಯಣ ಭಟ್, ನಿಯೋಜಿತ ಅಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ದೀಕ್ಷಿತ್ ದೇವಾಡಿಗ, ಸದಸ್ಯರಾದ ರಾಜೇಶ್ ಕುಲಾಲ್, ಹರಿಪ್ರಸಾದ್ ನಂದಳಿಕೆ, ಗಣೇಶ್ ಆಚಾರ್ಯ, ಯುವ ಜೇಸಿ ಅಧ್ಯಕ್ಷ ವೈಶಾಖ್
ಹೆಬ್ಬಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು