ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಮಾರಿಗುಡಿಗೆ ಪೇಜಾವರ ಶ್ರೀ ಭೇಟಿ

Published 10 ಜುಲೈ 2024, 6:30 IST
Last Updated 10 ಜುಲೈ 2024, 6:30 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ, 48 ದಿನಗಳ ಮಂಡಲೋತ್ಸವ ಮುಗಿಸಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿಗೆ ಭಾನುವಾರ ಭೇಟಿ ನೀಡಿದರು.

ದೇವಿಯ ದರ್ಶನ ಪಡೆದ ಸ್ವಾಮೀಜಿ ಮಾರಿಯಮ್ಮನ ಸನ್ನಿಧಾನದಲ್ಲಿ 9 ದೀಪಗಳನ್ನು ಬೆಳಗಿಸಿ ನಂತರ ನವದುರ್ಗಾ ಮಂಟಪದಲ್ಲಿ ಆಶೀರ್ವಚನ ನೀಡಿದರು.

ಜೀರ್ಣೋದ್ಧಾರ ಕೆಲಸಗಳು ಮಾರಿಯಮ್ಮ, ಶ್ರೀರಾಮಚಂದ್ರ, ಉಡುಪಿ ಶ್ರೀಕೃಷ್ಣನ ಅನುಗ್ರಹದಿಂದ ನಿರ್ವಿಘ್ನವಾಗಿ, ಸಾಂಗವಾಗಿ ನೆರವೇರಲಿ. ತಾಯಿಯ ಅನುಗ್ರಹ ಲೋಕದ ಸಮಸ್ತ ಜನರ ಮೇಲಿರಲಿ ಎಂದು ಹಾರೈಸಿದರು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಗೌರವಾಧ್ಯಕ್ಷ ಲಾಲಾಜಿ ಆರ್.ಮೆಂಡನ್, ಶ್ರೀನಿವಾಸ ತಂತ್ರಿ ಕಲ್ಯಾ, ಮಾಧವ ಆರ್.ಪಾಲನ್, ಕೃಷ್ಣ ಶೆಟ್ಟಿ, ಭಗವಾನ್ ದಾಸ್ ಶೆಟ್ಟಿಗಾರ್, ರಮೇಶ್ ಶೆಟ್ಟಿ ಕಾಪು ಕೊಲ್ಯ, ಪುರುಷೋತ್ತಮ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಂ, ಬಾಬು ಮಲ್ಲಾರ್, ಮಧುಕರ್ ಎಸ್, ಶಿಲ್ಪಾ ಜಿ.ಸುವರ್ಣ, ಸಾವಿತ್ರಿ ಗಣೇಶ್, ವಿದ್ಯಾಧರ ಪುರಾಣಿಕ್, ಮನೋಹರ್ ರಾವ್ ಕಲ್ಯಾ, ಲಕ್ಷ್ಮೀಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀ ನಾರಾಯಣ ತಂತ್ರಿ, ಶ್ರೀಧರ ಕಾಂಚನ್, ಸುಲೋಚನ ಕೆ.ಸುವರ್ಣ, ಜಗದೀಶ್ ಮೆಂಡನ್, ಮಮತಾ ಕುಶ ಸಾಲ್ಯಾನ್, ಕಲಾವತಿ ಪುತ್ರನ್, ಗೀತಾರಾಜ್, ಉಷಾ ಕೆ.ಪುತ್ರನ್, ದಿವಾಕರ ಶೆಟ್ಟಿ ಮಲ್ಲಾರ್, ಗೋವರ್ಧನ್ ಸೇರಿಗಾರ್, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT