ಕಾಪು (ಪಡುಬಿದ್ರಿ): 8 ವರ್ಷಗಳ ಕನಸಾಗಿದ್ದ ಇಂದಿರಾ ಕ್ಯಾಂಟೀನ್ ಇಲ್ಲಿನ ಬಂಗ್ಲೆ ಮೈದಾನದಲ್ಲಿ ನಿರ್ಮಾಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಕಡಿಮೆ ದರದಲ್ಲಿ ಜನರು ಹೊಟ್ಟೆ ತುಂಬಿಸಿಕೊಳ್ಳಲು ಸಹಕಾರಿಯಾಗಲಿದೆ.

2016ರಲ್ಲಿ ಕಾಪು ತಾಲ್ಲೂಕು ಆಗಿದ್ದು, ಇಂದಿರಾ ಕ್ಯಾಂಟೀನ್ ಕೂಡಾ ಘೋಷಣೆಯಾಗಿತ್ತು. ಜಾಗ ಮತ್ತು ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಜಾರಿ ವಿಳಂಬವಾಗಿತ್ತು. ಬಂಗ್ಲೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ಗೆ ಜಾಗ ಗುರುತಿಸಲಾಗಿತ್ತು. ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆದರೂ ಕಾಮಗಾರಿ ನಿಧಾನಗತಿಯಲ್ಲಿ ನಡೆದು ಕಾಮಗಾರಿ ಪೂರ್ಣಗೊಂಡಿದೆ.

ಪ್ಲಂಬಿಂಗ್ ವರ್ಕ್, ಬಾಗಿಲು, ಕಿಟಕಿ ಜೋಡಣೆ, ಗ್ಯಾಸ್ ಲೈನ್, ರೂಫ್ ಅಳವಡಿಕೆ, ಇಲೆಕ್ಟ್ರಿಕಲ್, ಫ್ಯಾಬ್ರಿಕೇಷನ್, ಪ್ಲೋರಿಂಗ್ ವರ್ಕ್, ವಾಟರ್ ಟ್ಯಾಂಕ್ ಅಳವಡಿಕೆ, ಶೌಚಾಲಯ ಕಾಮಗಾರಿ ಪೂರ್ಣಗೊಂಡಿದೆ. ಅಡುಗೆ ಕೋಣೆಯಲ್ಲಿ ಸಲಕರಣೆಗಳನ್ನು ಜೋಡಿಸಲಾಗಿದೆ. ಪುರಸಭೆಯ ಅನುದಾನದಿಂದ ಆವರಣ ಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದ್ದು, ಶೌಚಾಲಯ ಪಿಟ್ ಪೂರ್ಣಗೊಂಡಿದೆ.

ಇಂದಿರಾ ಕ್ಯಾಂಟೀನ್ ಆರಂಭಗೊಂಡಲ್ಲಿ ಈ ಭಾಗದಲ್ಲಿ ತಾಲ್ಲೂಕು ಕಚೇರಿ, ಶಾಸಕರ ಕಚೇರಿ, ಕಂದಾಯ ವಿಭಾಗ, ಚುನಾವಣಾ ವಿಭಾಗ, ಸರ್ವೆ ಇಲಾಖೆ, ಪುರಸಭೆ, ಯೋಜನಾ ಪ್ರಾಧಿಕಾರ, ಉಪ ಖಜಾನೆ, ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಪ್ರಧಾನ ಅಂಚೆ ಕಚೇರಿ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ ಸಹಿತ ಹತ್ತಾರು ಸರ್ಕಾರಿ ಕಚೇರಿಗಳಿವೆ. ಇಲ್ಲಿಗೆ ಬರುವವರಿಗೆ ಬಹಳ ಅನುಕೂಲವಾಗಲಿದೆ.

ಲೋಕಾರ್ಪಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ದಿನ ನಿಗದಿಯಾಗಿಲ್ಲ. ಜೂನ್ ತಿಂಗಳ ಮಧ್ಯದಲ್ಲಿ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ. ಪುರಸಭೆ ಅನುದಾನದಿಂದ ಆವರಣ ಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇಂಟರ್ಲಾಕ್ ಅಳವಡಿಕೆ ಬಾಕಿ ಇದ್ದು, ಉದ್ಘಾಟನೆಗೆ ಮುನ್ನ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಪುರಸಭೆ ಎಂಜಿನಿಯರ್ ಅಶ್ವಿನಿ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಒಂದು ದಿನ ಊಟ, ಉಪಹಾರ ತಯಾರಿಸಲಾಗಿದ್ದು, 150 ಮಂದಿ ಆಹಾರ ಸೇವಿಸಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿ ಪೂರ್ಣಗೊಂಡಿದೆ. ಪುರಸಭೆಯ ಕಾಮಗಾರಿಯೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ. ತಿಳಿಸಿದ್ದಾರೆ.

20ರಂದು ಉದ್ಘಾಟನೆ: ಕಾಪು, ಬೈಂದೂರಿನ ಇಂದಿರಾ ಕ್ಯಾಂಟೀನ್ಗಳು ಪ್ರಾಯೋಗಿಕವಾಗಿ ಆರಂಭ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ನಿರ್ದೇಶನದಂತೆ ಜೂನ್ 20ರಂದು ಬೈಂದೂರು, ಕಾಪುವಿನಲ್ಲಿ ಕ್ಯಾಂಟೀನ್ ಉದ್ಘಾಟನೆಯಾಗಲಿವೆ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್ರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.