ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಕಿಂಗ್ ಕ್ಷೇತ್ರ ನಿತ್ಯ ಅಭಿವೃದ್ಧಿಯಾಗುತ್ತಿದೆ: ರೆಕ್ಟರ್ ಆಲ್ಬನ್ ಡಿಸೋಜ

ಕಾರ್ಕಳ: ರೋಜರಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ 12ನೇ ಶಾಖೆ ಉದ್ಘಾಟನೆ
Published 18 ಮಾರ್ಚ್ 2024, 13:27 IST
Last Updated 18 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ಉಡುಪಿ: ಈಚಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಭಾಷೆ, ಅಭಿವೃದ್ಧಿಯಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ಬ್ಯಾಂಕಿಂಗ್ ಮೂಲಕ ಹಣ ಇದ್ದವರು ಇಡುವ ಠೇವಣಿಯನ್ನು, ಹಣ ಇಲ್ಲದವರಿಗೆ ವ್ಯವಹಾರಕ್ಕಾಗಿ ನೀಡುವ ಮೂಲಕ ಅಭಿವೃದ್ಧಿ ಪಥ ಸಾಕಾರಗೊಳ್ಳುತ್ತಿದೆ ಎಂದು ಅತ್ತೂರು ಸೇಂಟ್‌ ಲಾರೆನ್ಸ್ ಬಸಿಲಿಕಾದ ರೆಕ್ಟರ್ ಆಲ್ಬನ್ ಡಿಸೋಜ ಹೇಳಿದರು.

ಈಚೆಗೆ ಕಾರ್ಕಳದಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 12ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿ, ನೂತನ ಶಾಖೆಗೆ ನಮ್ಮ ಕಾಯಕರಾದ ಸೇಂಟ್‌ ಲಾರೆನ್ಸ್ ಅವರ ಅನುಗ್ರಹ ಇರಲಿ. ಗ್ರಾಹಕರ ವಿಶ್ವಾಸ ಗಳಿಸಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳಗಲಿ. ಅತ್ಯುನ್ನತ ಜನಸ್ನೇಹಿ ಕಾರ್ಯಕ್ರಮಗಳೊಂದಿಗೆ ಆರಂಭವಾಗಿರುವ ಸಂಸ್ಥೆಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಆಶೀರ್ವಚನ ನೀಡಿದ ಕ್ರೈಸ್ಟ್ ದಿ ಕಿಂಗ್ ಇಗರ್ಜಿಯ ಧರ್ಮಗುರು ಕ್ಲೈಮೆಂಟ್ ಮಸ್ಕರೇನ್ಹಸ್ ಮಾತನಾಡಿ, ಹಣ ಇರುವುದು ಉಪಯೋಗಕ್ಕಾಗಿ. ಅದನ್ನು ಒಳಗಿಡುವ ಬದಲು ಚಲಾವಣೆಯಲ್ಲಿ ಇಡಬೇಕು. ಹಣ ಇಲ್ಲದೆ ಇದ್ದರೆ ಸಾಮಾಜಿಕ ಬೆಲೆ ಕಡಿಮೆಯಾಗುತ್ತದೆ. ಸಮಾಜ ಪರಿವರ್ತನೆ, ವೈಯಕ್ತಿಕ ಒಳಿತಿಗಾಗಿ ಹಣದ ಅವಶ್ಯಕತೆ ಇದ್ದು, ಭಗವಂತನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದರು.

ಕುಕ್ಕುಂದೂರು ಗ್ರಾಮ ಪಂಚಾಯಿತಿ ಸದಸ್ಯ ಥಾಮಸ್ ಮಸ್ಕರೇನಸ್ ಶಾಖೆಯ ಭದ್ರತಾ ಕೊಠಡಿ, ಕ್ರೈಸ್ಟ್ ದ ಕಿಂಗ್ ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ನೇವಿಲ್ ಡಿಸಿಲ್ವ ಕಂಪ್ಯೂಟರ್ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿಆಲ್ಮೆಡಾ, ನಿರ್ದೇಶಕರಾದ ಫಿಲಿಪ್ ಡಿಕೋಸ್ತ, ವಿಲ್ಸನ್ ಡಿಸೋಜ, ಪ್ರಕಾಶ್ ಲೋಬೊ, ಒಜ್ಲಿನ್ ರೆಬೆಲ್ಲೊ, ಟೆರೆನ್ಸ್ ಸುವಾರಿಸ್, ಮೈಕಲ್ ಪಿಂಟೊ, ಡಯಾನ ಅಲ್ಮೇಡಾ, ಶಾಂತಿ ಡಾಯಸ್ ಇದ್ದರು. ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಅಲ್ಮೆಡಾ ಸ್ವಾಗತಿಸಿದರು. ಶಾಖಾ ಸಭಾಪತಿ ಓಜ್ವಾಲ್ಡ್ ಸಂತೋಷ್ ಡಿಸಿಲ್ವ ವಂದಿಸಿದರು. ಸ್ಟೀವನ್ ಕುಲಾಸೊ ನಿರೂಪಿಸಿದರು.

₹130 ಕೋಟಿ ಸಾಲ ನೀಡಿಕೆ

₹155 ಕೋಟಿಗೂ ಅಧಿಕ ಠೇವಣಿ ಹೊಂದಿರುವ ಸಂಸ್ಥೆಯಿಂದ ₹130 ಕೋಟಿ ಸಾಲ ನೀಡಲಾಗಿದೆ. ₹186 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಇದೆ. ಸ್ಥಾಪನೆಯಾದ ವರ್ಷದಿಂದ ನಿರಂತರ ಗ್ರಾಹಕರ ನಿರೀಕ್ಷೆಗೆ ಅನುಗುಣವಾಗಿ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ರೋಜರಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ  ಜಾನ್ಸನ್ ಡಿಅಲ್ಮೆಡಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT