ಮಂಗಳವಾರ, ಜನವರಿ 18, 2022
24 °C

ವಿದ್ಯಾಸಾಗರ ತೀರ್ಥ ಶ್ರೀಗಳಿಂದ ಕೃಷ್ಣಾಪುರ ಮಠದ ವೆಬ್‌ಸೈಟ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಪು: ಕಾಪುವಿನ ದಂಡತೀರ್ಥ ಮಠದಲ್ಲಿ ಸೋಮವಾರ ಭಾವಿ ಪರ್ಯಾಯ ಕೃಷ್ಣಾಪುರ ಮಠದ ವೆಬ್ ಸೈಟ್ (www.krishnapuramatha.org) ಅನ್ನು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿದರು.

ಮಠದ ವೆಬ್‌ಸೈಟ್‌ನಲ್ಲಿ ಎಲ್ಲ ವಿಚಾರಗಳು ಅಡಕವಾಗಿದ್ದು, ದೇಶ ವಿದೇಶಗಳಲ್ಲಿರುವ ಭಕ್ತರಿಗೆ ಮಠದ ವಿಚಾರಗಳು ತಿಳಿಯಲಿದೆ. ಎಲ್ಲ ಭಕ್ತರು ವೆಬ್‌ಸೈಟ್‌ನ ಪ್ರಯೋಜನ ಪಡೆಯಬೇಕು ಎಂದು ಸ್ವಾಮೀಜಿ ಹೇಳಿದರು.

ಈ ಸಂದರ್ಭ ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು, ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ರಾವ್, ಶ್ರೀಶ ಆಚಾರ್ಯ, ಸೀತಾರಾಮ ಭಟ್, ವೆಬ್ ಸೈಟ್‌ ವಿನ್ಯಾಸ ಮಾಡಿದ ವಾದಿರಾಜ ಆಚಾರ್ಯ ಮತ್ತು ವಸಂತ ಕೇದಗೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು