ಕುಂದಾಪುರ: 2024-25ನೇ ಸಾಲಿನ ‘ಪುಷ್ಠಿ’ ಕಾರ್ಯಕ್ರಮದಡಿ ಶಾಲಾ ಶೈಕ್ಷಣಿಕ ಹಾಗೂ ಮೂಲಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ಕಾರ್ಯನಿರ್ವಹಿಸಿದ ಎಸ್ಡಿಎಂಸಿಗೆ ನೀಡುವ ‘ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ’ಗೆ ಬೀಜಾಡಿಯ ಸೀತಾಲಕ್ಷ್ಮಿ ಮತ್ತು ಬಿ.ಎಂ.ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಯ ಪಾತ್ರವಾಗಿದೆ.

ತಾಲ್ಲೂಕಿನ ಕರಾವಳಿಯ ಗ್ರಾಮೀಣ ಭಾಗವಾದ ಬೀಜಾಡಿಯಲ್ಲಿ, ಸರ್ಕಾರ ಹಾಗೂ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ 2006ರಲ್ಲಿ ಉಡುಪಿಯ ಸೋದೆ ಶ್ರೀ ವಾದಿರಾಜ ಮಠದ ಯತಿ ವಿಶ್ವೋತ್ತಮ ತೀರ್ಥ ಶ್ರೀಪಾದಂಗಳವರಿಂದ ಉದ್ಘಾಟನೆಗೊಂಡಿದ್ದ ಈ ಪ್ರೌಢಶಾಲೆ, ಸುಂದರ ಕಟ್ಟಡವನ್ನು ಹೊಂದಿ ಕರಾವಳಿ ಭಾಗಕ್ಕೆ ಕಲಶಪ್ರಾಯವಾಗಿದೆ.

2006-07ರಲ್ಲಿ 36 ವಿದ್ಯಾರ್ಥಿಗಳಿದ್ದ ಈ ಶಾಲೆಯು 2024-25ನೇ ಶೈಕ್ಷಣಿಕ ವರ್ಷದಲ್ಲಿ 110 ವಿದ್ಯಾರ್ಥಿಗಳನ್ನು ಹೊಂದಿದೆ.

ಆರ್ಥಿಕವಾಗಿ ಹಿಂದುಳಿದಿದ್ದ ಬೀಜಾಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಮಕ್ಕಳು, ಹಿರಿಯ ಪ್ರಾಥಮಿಕ ಶಿಕ್ಷಣ ಬಳಿಕ ಪ್ರೌಢಶಾಲಾ ಶಿಕ್ಷಣಕ್ಕಾಗಿ ದೂರದ ಕೋಟೇಶ್ವರ ಹಾಗೂ ತೆಕ್ಕಟ್ಟೆಗೆ ಹೋಗಬೇಕಾದ ಅನಿವಾರ್ಯತೆ ಇದ್ದ ದಿನಗಳಲ್ಲಿ, ನಮ್ಮೂರಿನ ಮಕ್ಕಳು ಪ್ರೌಢ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾಳಜಿ ಹೊಂದಿದ್ದ ಶಿಕ್ಷಣ ಅಭಿಮಾನಿ ಶೇಷಗಿರಿ ಗೋಟರ ನೇತೃತ್ವದಲ್ಲಿ, ಊರ ವಿದ್ಯಾಭಿಮಾನಗಳು ನಡೆಸಿದ ಪ್ರಯತ್ನದ ಫಲವಾಗಿ ಈ ಪ್ರೌಢಶಾಲೆ ಆರಂಭವಾಗಿತ್ತು.

ಶಾಲೆಯ ಪ್ರಾರಂಭದಿಂದ ಇಂದಿನವರೆಗೂ ಊರಿನವರ ಆಸರೆಯಿಂದಾಗಿ ಹಾಗೂ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಕೀರ್ತಿಶೇಷ ಬಿ.ಎಂ.ಹತ್ವಾರ್ ಅವರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.

ಪಠ್ಯೇತರ ಚಟುವಟಿಕೆ: ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಸಹಕಾರದಿಂದ ಜೂನ್ ತಿಂಗಳಿಂದ ಡಿಸೆಂಬರ್ ವರೆಗೆ ವಾರದಲ್ಲಿ ಎರಡು ದಿನ ನುರಿತ ಯಕ್ಷಗಾನ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ ಹಾಗೂ ತರಬೇತಿ ಪಡೆದುಕೊಂಡ ಶಿಕ್ಷಣಾರ್ಥಿಗಳಿಂದ ಕೊನೆಗೆ ಯಕ್ಷಗಾನ ಪ್ರದರ್ಶನ ನಡೆಯುತ್ತದೆ.

ಇಕೋ ಕ್ಲಬ್ ಮೂಲಕ ಪರಿಸರ ಜಾಗೃತಿ ನಡೆಯುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಹಂತಗಳ ಬಹುಮಾನ ಪಡೆದಿಕೊಂಡರೆ, ಖೋಖೋ ಕ್ರೀಡೆಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಗ್ರಾಹಕ ಕ್ಲಬ್ ಮೂಲಕ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಅಭಿವೃದ್ಧಿಯ ಗುರಿಗಳು: ಲಕ್ಷ್ಮಣ ಟಿ. ನಾಯ್ಕ ಅಧ್ಯಕ್ಷತೆಯ ಶಾಲಾಭಿವೃದ್ಧಿ ಹಾಗೂ ಸ್ಥಳೀಯ ಮುಖಂಡ ಶೇಖರ ಚಾತ್ರಬೆಟ್ಟು ನೇತೃತ್ವದ ಶಾಲಾ ಹಿತರಕ್ಷಣಾ ಸಮಿತಿ ಶಾಲೆಯ ಒಟ್ಟಾರೆ ಅಭಿವೃದ್ಧಿ ಬಗ್ಗೆ ನೀಲ ನಕಾಶೆಯನ್ನು ಸಿದ್ಧಪಡಿಸಿಕೊಂಡು, ದಾನಿಗಳ ನೆರವಿನೊಂದಿಗೆ, ಅಭಿವೃದ್ಧಿಯ ಗುರಿ ಸಾಧಿಸಲು ಟೊಂಕ ಕಟ್ಟಿ ನಿಂತಿದೆ.

2024-25ನೇ ಸಾಲಿನಲ್ಲಿ ಶಾಲೆಗೆ 66 ವಿದ್ಯಾರ್ಥಿಗಳು ದಾಖಲಾಗಿದ್ದು, ಹಿತರಕ್ಷಣಾ ಸಮಿತಿ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಟೊ ರಿಕ್ಷಾ ವ್ಯವಸ್ಥೆ ಮಾಡಿದ್ದು ಅದಕ್ಕಾಗಿ ವಾರ್ಷಿಕ ಅಂದಾಜು ₹3.5 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ಮಂಜುನಾಥ ರಾವ್ ಅವರ ಶೇಷಗಿರಿ ವಿದ್ಯಾ ವಿಕಾಸ ಟ್ರಸ್ಟ್ ಕುಂದಾಪುರ ವತಿಯಿಂದ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಗಾಗಿ 10 ಕಂಪ್ಯೂಟರ್, ಯುಪಿಎಸ್, ಪ್ರಾಜೆಕ್ಟರ್, ಅವುಗಳ ನಿರ್ವಹಣೆ ಹಾಗೂ ಕಂಪ್ಯೂಟರ್ ಶಿಕ್ಷಕರ ಸಂಭಾವನೆ ಒಟ್ಟು ಅಂದಾಜು ₹4 ಲಕ್ಷ ಪಡೆದುಕೊಳ್ಳಲಾಗಿದೆ.

ಮುಖ್ಯ ಶಿಕ್ಷಕಿ ವಿನೋದಾ ಎಂ. ಹಾಗೂ ಅವರ ಪತಿ ಮುರಳೀ ಕಡೆಕಾರ್ ದಂಪತಿ ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಾಣಕ್ಕಾಗಿ ₹3 ಲಕ್ಷ ಕೊಡುಗೆ ನೀಡಿದ್ದಾರೆ. ಶಂಕರ ಐತಾಳ್ ಅವರ ಗೀತಾ ಎಚ್ಎಸ್ಎನ್ ಫೌಂಡೇಷನ್ ವತಿಯಿಂದ ₹75 ಸಾವಿರ ಮೌಲ್ಯದಲ್ಲಿ 110 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ನೀಡಲಾಗಿದೆ.

ಬೆಂಗಳೂರಿನ ಭಾರ್ಗವಿ ಭಟ್ ಬೆಂಗಳೂರು ಅವರು ₹40 ಸಾವಿರ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಒದಗಿಸಿದ್ದಾರೆ. ಬೀಜಾಡಿಯ ನಾಗರಾಜ ರಾವ್ ಪೀಠೋಪಕರಣ ರಿಪೇರಿಗಾಗಿ ₹60 ಸಾವಿರ ನೀಡಿದ್ದಾರೆ. ಕುಂದಾಪುರದ ನಾಗಯ್ಯ ಶೆಟ್ಟಿ ಅವರು ₹35 ಸಾವಿರ ವೆಚ್ಚದಲ್ಲಿ ಕವಾಯತು ಬ್ಯಾಂಡ್ ಸೆಟ್ ನೀಡಿದ್ದಾರೆ. ಶಾಲೆಯ ಮೈದಾನಕ್ಕೆ ಬೀಜಾಡಿ ಗ್ರಾಮ ಪಂಚಾಯಿತಿ ವತಿಯಿಂದ ₹2 ಲಕ್ಷ ವೆಚ್ಚದಲ್ಲಿ ಮಣ್ಣು ತುಂಬಿಸಲಾಗಿದೆ.

ಕೋಟೇಶ್ವರದ ಚೇತನಾ ಸಂಸ್ಥೆ ₹20 ಸಾವಿರ ಮೌಲ್ಯದ 2 ಗಾಡ್ರೇಜ್ ನೀಡಿದೆ. ಕುಂದಾಪುರದ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊಸ ಪೀಠೋಪಕರಣ ಖರೀದಿಗಾಗಿ ₹78 ಸಾವಿರ ಪಡೆದುಕೊಳ್ಳಲಾಗಿದೆ. ಉದ್ಯಮಿ ಸಮೀರ್ ಚೌದರಿ ಅವರು ₹30 ಸಾವಿರ ಮೌಲ್ಯದ ಪ್ರಾಜೆಕ್ಟರ್ ನೀಡಿದ್ದಾರೆ.

ವಿದ್ಯಾಭಿಮಾನಿಗಳಾದ ಜಚಿಂತಾ ₹20 ಸಾವಿರ, ರಾಜೇಂದ್ರ ಪ್ರಭು ₹40 ಸಾವಿರ ಸೇರಿದಂತೆ ಇನ್ನೂ ಹಲವಾರು ದಾನಿಗಳು ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ಐದು ತರಗತಿ ಕೊಠಡಿಗಳು ಮಾತ್ರ ಲಭ್ಯವಿದ್ದು, ಶಾಲೆಗೆ ತರಗತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ ಕೊಠಡಿಗಳ ಅಗತ್ಯವಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ ನಡೆಸಲು ಸಭಾಭವನ ನಿರ್ಮಾಣವೂ ತುರ್ತು ಅಗತ್ಯವಾಗಿದೆ.

ಈ ಉದ್ದೇಶಕ್ಕಾಗಿ ಅಂದಾಜು ₹60 ಲಕ್ಷ ವೆಚ್ಚದಲ್ಲಿ, ಎರಡು ತರಗತಿ ಕೊಠಡಿಗಳಿರುವ ಪುಟ್ಟ ಸಭಾಭವನದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ ₹3 ಲಕ್ಷ , ಕೋಟ ಗೀತಾನಂದ ಫೌಂಡೇಷನ್ ಪ್ರವರ್ತಕರಾದ ಆನಂದ ಸಿ. ಕುಂದರ್ ₹5 ಲಕ್ಷ ಹಾಗೂ ನಾಗರಾಜ ಬೀಜಾಡಿ ಅವರು ₹1.11 ಲಕ್ಷ ದೇಣಿಗೆ ನೀಡಿದ್ದು, ಈ ಉದ್ದೇಶಕ್ಕಾಗಿ ಹಲವಾರು ದಾನಿಗಳು ಸಹಾಯ ಹಸ್ತ ಚಾಚಿದ್ದು, ದೇಣಿಗೆ ನೀಡುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಉತ್ತಮ ಫಲಿತಾಂಶ

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತಿರುವ ಇಲ್ಲಿನ ಶಿಕ್ಷಕ ವರ್ಗದ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸುತ್ತಿದ್ದಾರೆ. ಪ್ರತಿವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಯು ಶೇ 90ಕ್ಕಿಂತಲೂ ಹೆಚ್ಚಿನ ಫಲಿತಾಂಶ ದಾಖಲಿಸುತ್ತಾ ಬಂದಿದೆ. ಐದು ಬಾರಿ ಶೇ 100ರಷ್ಟು ಫಲಿತಾಂಶ ಗಳಿಸಿ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು 11 ಶಿಕ್ಷಕರು ಪಾಠ-ಪ್ರವಚನದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದೆ. ಹೊಸ ಕಟ್ಟಡ ರಚನೆಗಾಗಿ ಸರ್ಕಾರದಿಂದ ಮಂಜೂರಾದ ₹20 ಲಕ್ಷ ಮತ್ತು ಶಿಕ್ಷಣಾಭಿಮಾನಿಗಳ ಸಹಕಾರದಿಂದ ಕಟ್ಟಡ ರಚನಾ ಸಮಿತಿಯ ಮೂಲಕ 8 ಕೊಠಡಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.