ಕುಂದಾಪುರ: ಕೋಟೇಶ್ವರ ಸಮೀಪದ ಬೀಜಾಡಿ ಗ್ರಾಮ ಪಂಚಾಯಿತಿಯ ಬಂಡಿಕಡು ಬೊಬ್ಬರ್ಯ ದೇವಸ್ಥಾನ ಸೇವಾ ಸಮಿತಿ ಹಾಗೂ ಕಮ್ತೀಯಾರ್ ಬೆಟ್ಟು ಹೋದ್ರಾಳಿಯ ಮಹಿಳಾ ಸೇವಾ ಸಂಘದ ವತಿಯಿಂದ ಬಂಡಿಕಡು ಬೊಬ್ಬರ್ಯ ದೇವಸ್ಥಾನದ ವರ್ಧಂತ್ಯೋತ್ಸವ ನಡೆಯಿತು.

ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದ ಬಂಡಿಕಡು ಬೊಬ್ಬರ್ಯ ಸೇವಾ ಸಮಿತಿಯ ಪ್ರಮುಖರು ದೇವಸ್ಥಾನಕ್ಕೆ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ರಸ್ತೆ ನಿರ್ಮಾಣಕ್ಕೆ ಖಾಸಗಿ ಜಾಗದ ಅವಶ್ಯಕತೆ ಇರುವುದರಿಂದ ಮಾತುಕತೆ ನಡೆಸಬೇಕಾಗಿದೆ. ಇದಾದ ಬಳಿಕ ಸರ್ಕಾರದ ಅನುದಾನ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಬಂಡಿಕಡು ಬೊಬ್ಬರ್ಯ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಎಂ ಮೊಗವೀರ, ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಜಗನ್ನಾಥ್, ಬೀಜಾಡಿ ಗ್ರಾಮ ಪಂಚಾಯಿತ ಸದಸ್ಯರಾದ ವಿಶ್ವನಾಥ ಮೊಗವೀರ, ಪೂರ್ಣಿಮಾ, ಪ್ರಸನ್ನ ದೇವಾಡಿಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.