ಮಂಗಳೂರಿನಿಂದ ಕುಟುಂಬ ಸದಸ್ಯರೊಂದಿಗೆ ಇನೋವಾ ಕಾರಿನಲ್ಲಿ ಭಟ್ಕಳದ ಮನೆಗೆ ಮರಳುತ್ತಿದ್ದ ಮೂಸ ನಗರದ ನಿವಾಸಿ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ ಅವರಿಗೆ ಆರಾಟೆ ಸೇತುವೆ ಬಳಿ ಬರುತ್ತಿರುವಾಗ ಕಾರಿನಲ್ಲಿ ಅಸಹಜ ಶಬ್ದ ಕೇಳಿಸಿದೆ. ಶಬ್ದ ಏನು ಎಂದು ಪರಿಶೀಲಿಸಲು ಕಾರು ನಿಲ್ಲಸಿ ಕೆಳಕ್ಕೆ ಇಳಿದಿದ್ದ ಅವರು ಮರಳಿ ಹತ್ತಲು ಮುಂದಾಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಗಂಗೊಳ್ಳಿ ಅವರ ಆಂಬುಲೆನ್ಸ್‌ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವ ಬಗ್ಗೆ ತಿಳಿಸಿದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.