ಕಾರ್ಕಳ: ತಾಲ್ಲೂಕಿನ ದುರ್ಗಾ ಗ್ರಾಮದಲ್ಲಿ ಪುರಸಭೆಯ ವತಿಯಿಂದ ಮುಂಡ್ಲಿ ಜಾಕ್ವೆಲ್ಗೆ ನೀರು ಒದಗಿಸುವ ಎಂಎಸ್ ಗೇಟ್ಗಳು ಹಾಗೂ ಪಂಪ್ಹೌಸ್ನ ಕೆಳಭಾಗದ ದಾಸ್ತಾನು ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಒಟ್ಟು 160 ಸಂಖ್ಯೆಯ ಎಂಎಸ್ ಗೇಟ್ಗಳು ಹಾಗೂ ಜಾಕ್ವೆಲ್ಗೆ ಬೆಳಕಿಗಾಗಿ ಅಳವಡಿಸಿದ್ದ 3 ಸೋಲಾರ್ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಇವುಗಳ ಒಟ್ಟು ಮೌಲ್ಯ ₹ 4.95 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ತಾಲ್ಲೂಕಿನ ಮಿಯ್ಯಾರು ಗ್ರಾಮದ ಪಕಳ ಬೆಟ್ಟು ನಿವಾಸಿ ಬಾಬು ಪೂಜಾರಿ (55) ಎನ್ನುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಸ್ಕೂಟರ್ ಸವಾರ ಸಾವು

ಹಿರಿಯಡಕ: ಹಿರಿಯಡಕ ಸಮೀಪದ ಗುಡ್ಡೆಯಂಗಡಿಯಲ್ಲಿ ಮಿನಿ ಟೆಂಪೊ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ. ಗುಡ್ಡೆಯಂಗಡಿ ನಿವಾಸಿ ವಿಘ್ನೇಶ್ ಪೂಜಾರಿ ಮೃತ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಕಾರ್ಕಳದಿಂದ ಮಣಿಪಾಲದ ಕಡೆಗೆ ವೇಗವಾಗಿ ಟೆಂಪೊ ಚಲಾಯಿಸಿಕೊಂಡು ಹೋಗಿ, ಸ್ಕೂಟರ್ಗೆ ಡಿಕ್ಕಿ ಹೊಡೆದ ಆರೋಪದ ಮೇಲೆ ಚಾಲಕ ರವಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.