ಸನಾತನ ಧರ್ಮವನ್ನು ಒಡೆದು ಲಿಂಗಾಯತ ಧರ್ಮ ಕಟ್ಟಲಾಗಿದೆಯೇ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿ ವರ್ಣ ಭೇದ ಲಿಂಗಭೇದ ವರ್ಗಭೇದದ ವ್ಯವಸ್ಥೆಯೊಳಗೆ ಬಸವಣ್ಣನವರು ಸಮಾನತೆಯನ್ನು ಬಯಸಿದ್ದರು. ಈ ಕಾರಣಕ್ಕೆ ಅವರು ಹೊಸ ಧರ್ಮ ಕಟ್ಟಿದ್ದಾರೆಯೇ ಹೊರತು ಯಾವುದನ್ನೂ ಒಡೆದು ಕಟ್ಟಲಿಲ್ಲ. ಇನ್ನೊಂದನ್ನು ತಿಳಿದು ಕಟ್ಟಿದ್ದಾರೆ. ಅದುವೇ ಲಿಂಗಾಯತ ಧರ್ಮ ಎಂದರು.