ಬ್ರಹ್ಮಾವರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕೋಟ ಮಿತ್ರ ಮಂಡಳಿ ಆಶ್ರಯದಲ್ಲಿ ಕೊಡಮಾಡುವ ಹುಟ್ಟೂರ ಸಾಹಿತ್ಯ ಸಾಧಕ ಪ್ರಶಸ್ತಿಗೆ ಸಾಹಿತಿ, ರಂಗ ಕಲಾವಿದ, ಶಿಕ್ಷಣ ತಜ್ಞ ಪಾರಂಪಳ್ಳಿ ನರಸಿಂಹ ಐತಾಳ ಆಯ್ಕೆಯಾಗಿದ್ದಾರೆ.

ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರಂತ ಸಭಾಭವನದಲ್ಲಿ ಮೇ 10ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ನಿ.ವಿಜಯ ಬಲ್ಲಾಳರ ಉಪಸ್ಥಿತಿಯಲ್ಲಿ ಐತಾಳರಿಗೆ ಪ್ರಶಸ್ತಿ ಪ್ರದಾನ ಜರುಗಲಿದೆ.

ಐತಾಳರ ಸಾಹಿತ್ಯಾವಲೋಕನದಲ್ಲಿ ನಾಟಕ ಸಾಹಿತ್ಯದ ಕುರಿತು ಪಿ. ಮಂಜುನಾಥ ಉಪಾಧ್ಯ, ಕಾವ್ಯ ಪ್ರಕಾರಗಳ ಬಗೆಗೆ ಸುಮನ ಹೇರ್ಳೆ, ಸಂಕೀರ್ಣ ಕೃತಿಗಳ ಕುರಿತು ನೀಲಾವರ ಸುರೇಂದ್ರ ಅಡಿಗ, ಸಾಹಿತ್ಯೇತರ ಕ್ಷೇತ್ರದ ಬಗೆಗೆ ಶ್ರೀಪತಿ ಹೇರ್ಳೆ ಮಾಹಿತಿ ನೀಡಲಿದ್ದು, ಗಿಳಿಯಾರು ಶ್ರೀನಿವಾಸ ಅಡಿಗ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ಪ್ರೊ.ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.