ಪಡುಬಿದ್ರಿ: ಫೈನಾನ್ಸ್ನಲ್ಲಿ ಸಾಲ ಪಡೆದ ಮಹಿಳೆಯೊಬ್ಬರು ಸಾಲದ 1 ಕಂತು ಮರುಪಾವತಿಗೆ ಒಂದು ಕಂತು ತಡವಾಗಿರುವುದರಿಂದ ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ಪ್ರಕರಣ ದಾಖಲಾಗಿದೆ.

ಬಡಾ ಗ್ರಾಮದ ನಿವಾಸಿ ಪುಷ್ಪಲತಾ ಇವರು ೨೦೨೪ ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಮುಕ್ಕದ ಸಾನಿಧ್ಯ ಪೈನಾನ್ಸ್ನಲ್ಲಿ ರೂ ೩೦,೦೦೦ ಸಾಲ ಪಡೆದುಕೊಂಡಿದ್ದರು. ಸಾಲದ ಕಂತುಗಳನ್ನು ಪ್ರತೀ ತಿಂಗಳು ಗೂಗಲ್ ಪೇ ಹಾಗೂ ಕೆಲವೊಮ್ಮೆ ನಗದಾಗಿ ಮುಖಾಂತರ ಪೈನಾನ್ಸ್ ನವರಿಗೆ ಪಾವತಿ ಮಾಡುತ್ತಿದ್ದರು. ಸಾಲ ಮರುಪಾವತಿ ಮಾಡಲು ತಡವಾದುದಕ್ಕೆ ಇತ್ತೀಚೆಗೆ ಒಂದು ವಾರದಿಂದ ಪೈನಾನ್ಸ್ನ ರಿಕವರಿ ಆಫೀಸರ್ ಅಶ್ರಫ್ ಹಾಗೂ ಇತರರು ಮನೆಗೆ ಪದೇ ಪದೇ ಬಂದು ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ತಲೆ ಒಡೆದು ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ಥೆ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕರ್ನಾಟಕ ಮೈಕ್ರೋ ಲೋನ್ ಅಂಡ್ ಸ್ಮಾಲ್ ಲೋನ್ ಪ್ರಿವೆನ್ಷನ್ ಆಫ್ ಕಾನ್ ಕ್ರೀವ್ ಆಕ್ಷನ್ ಆರ್ಡಿನೆನ್ಸ್ ರಂತೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.