ಬೈಂದೂರು: ಗುಣಮಟ್ಟದ ಶಿಕ್ಷಣ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉತ್ತಮ ಕಾರ್ಯನಿರ್ವಹಣೆಗಾಗಿ ನಾಗೂರು ಹಿಂದುಸ್ಥಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಷ್ಟಿ ಕಾರ್ಯಕ್ರಮದಡಿ ರಾಜ್ಯ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪತ್ರ ಮತ್ತು ₹1 ಲಕ್ಷ ನಗದು ಮೇಲುಸ್ತುವಾರಿ ಸಮಿತಿಗೆ ಸಿಗಲಿದೆ.

ವಿದ್ಯಾವಾಹಿನಿ ಪೋರ್ಟಲ್ನಲ್ಲಿ ಬೈಂದೂರು ತಾಲ್ಲೂಕಿನ 191 ಶಾಲೆಗಳು ಪ್ರಶಸ್ತಿಗಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ತಾಲ್ಲೂಕಿನಿಂದ ಹಿಂದುಸ್ಥಾನಿ ಶಾಲೆಯನ್ನು ಆರಿಸಲಾಗಿದೆ.

ಶಾಲೆಯ ಇತಿಹಾಸ: 1973ರಲ್ಲಿ ಆರಂಭಗೊಂಡ ನಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಉರ್ದು ಶಾಲೆಯಲ್ಲಿ ಈಗ ಒಟ್ಟು 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

2018ರಲ್ಲಿ ಕೇವಲ ಎಂಟು ವಿದ್ಯಾರ್ಥಿಗಳು ಇದ್ದು ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯನ್ನು ಬೇರೆ ಶಾಲೆಯೊಂದಿಗೆ ವಿಲೀನಗೊಳಿಸಲು ಇಲಾಖೆ ಮುಂದಾಗಿತ್ತು. ಆದರೆ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಊರವರು ಮತ್ತು ಶಿಕ್ಷಕರ ಬಳಗದವರು ಪಣ ತೊಟ್ಟರು.

ಎಸ್ಡಿಎಂಸಿ ಜೊತೆಯಲ್ಲಿ ಎಸ್ಡಿಸಿ ರಚಿಸಿ ಸ್ವಂತ ವಾಹನ, ಪೀಠೋಪಕರಣ ಖರೀದಿಸಿ, ರೈಲಿನಂತೆ ಕಾಣುವ ಬಣ್ಣ ಬಳಿದು ಕೆಲವು ತಾತ್ಕಾಲಿಕ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. ಮನೆ ಮನೆಗೆ ತೆರಳಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಯತ್ನ ನಡೆಯಿತು. 2023ರಲ್ಲಿ ಸುವರ್ಣ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು.

ಊರವರ ಸಹಕಾರದಿಂದ ಶಾಲೆ ಅಭಿವೃದ್ಧಿಯಾಗಿದ್ದು ಒಂದರಿಂದ ಏಳನೇ ತರಗತಿ ವರೆಗೆ 222 ವಿದ್ಯಾರ್ಥಿಗಳು ಹಾಗೂ ಎಲ್ಕೆಜಿ, ಯುಕೆಜಿಯಲ್ಲಿ 60 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚುವರಿ 4 ಕೊಠಡಿಗಳ ನಿರ್ಮಾಣ ಆಗಿದೆ. ಶಿಕ್ಷಕರ ಕೊರತೆ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತುರ್ತಾಗಿ ಶಾಲಾ ವಾಹನದ ವ್ಯವಸ್ಥೆ ಆಗಬೇಕಿದೆ ಎಂದು ಮುಖ್ಯ ಶಿಕ್ಷಕ ವಿಶ್ವನಾಥ ಪೂಜಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.