ಹೆಬ್ರಿ: ನಿತ್ಯ ದೇವರ ನಾಮಸ್ಮರಣೆ, ಹರಿನಾಮ ಸಂಕೀರ್ತನೆ, ಭಾಗವತ, ಪುರಾಣ ಓದುವುದರಿಂದ ಭಗವಂತನ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ. ಭಗವಂತನ ನಾಮಸ್ಮರಣೆಯಿಂದ ಸಕಲ ಪಾಪ ನಾಶವಾಗುತ್ತದೆ ಎಂದು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಶಾರದಮ್ಮ ಶ್ರೀಧರ್ ಭಟ್ ವೇದಿಕೆಯಲ್ಲಿ ವಿಷ್ಣುಮೂರ್ತಿ ಬ್ರಾಹ್ಮಣ ಸಂಫದ ವತಿಯಿಂದ ನಡೆದ ಸಂಘದ ರಜತ ಸಂಭ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ವೀಣಾ ಆರ್. ಭಟ್ ವರಂಗ, ಹೈನುಗಾರಿಕೆಯಲ್ಲಿ ವಿಶೇಷ ಸಾಧನೆಗೈದ ಸೌಮ್ಯ ಬಾಲಕೃಷ್ಣ ಭಟ್, ಹಿರಿಯರಾದ ವೆಂಕಟರಮಣ ಉಪಾಧ್ಯಾಯ ಮತ್ತು ಶಶಿನಿ ಉಪಾಧ್ಯಾಯ ದಂಪತಿಯನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಸಂಫದ ಏಳಿಗೆಯಲ್ಲಿ ಶ್ರಮಿಸಿದ ಹಲವರನ್ನು ಗೌರವಿಸಲಾಯಿತು.

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಂಗನಾಥ ಭಟ್ ಶುಭ ಹಾರೈಸಿದರು. ವಿಷ್ಣುಮೂರ್ತಿ ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ ಪುತ್ರಾಯ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಸಂಘದ ಮಾಜಿ ಕಾರ್ಯದರ್ಶಿ ಶ್ರೀಪತಿ ಬೆಳಿರಾಯ ಸ್ವಾಗತಿಸಿದರು. ಬ್ರಾಹ್ಮಣ ಸಂಫದ ಸ್ಥಾಪಕ ಅಧ್ಯಕ್ಷ ರಾಘವೇಂದ್ರ ಭಟ್ ಗುಡ್ಡೆಯಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು. ಬ್ರಾಹ್ಮಣ ಸಂಘದ ಕಾರ್ಯದರ್ಶಿ ಪವನ್ ಕುಮಾರ್ ವಂದಿಸಿದರು.

ವರಂಗ ರಾಮಚಂದ್ರ ಭಟ್, ಚಂದ್ರಶೇಖರ ಅಡಿಗ, ಬಾಲಕೃಷ್ಣ ಭಟ್, ಸುಧೀರ ಪುತ್ರಾಯ, ವಿಮಲಾ ನಾಗರಾಜ ಭಟ್, ಶ್ವೇತಾ ಶ್ರೀನಿವಾಸ ಭಟ್, ವಿಶಾಲ್ ತಂತ್ರಿ ಸಹಿತ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.