ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ ಬೀಚ್‌ನಲ್ಲಿ ಸ್ವಚ್ಛತಾ ಮಾಹಿತಿ

Published : 29 ಸೆಪ್ಟೆಂಬರ್ 2024, 7:12 IST
Last Updated : 29 ಸೆಪ್ಟೆಂಬರ್ 2024, 7:12 IST
ಫಾಲೋ ಮಾಡಿ
Comments

ಪಡುಬಿದ್ರಿ: ಪರಿಸರ ಸ್ವಚ್ಛವಾಗಿಡುವುದರಿಂದ ಊರು ಸ್ವಚ್ಛವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಥಿಗಳು ಸ್ಚಚ್ಛತೆಗೆ ಮಹತ್ವ ನೀಡಬೇಕು ಎಂದು ಎಸ್‌ಐ ಪ್ರಸನ್ನ ಕುಮಾರ್ ಕರೆ ನೀಡಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ಆಶ್ರಯದಲ್ಲಿವಿಶ್ವ ಪ್ರವಾಸೋಧ್ಯಮ ದಿನಾಚರಣೆ ಪ್ರಯುಕ್ತ ಪಡುಬಿದ್ರಿ ಬೀಚ್‌ನಲ್ಲಿ ಪ್ರವಾಸೋದ್ಯಮ ಮತ್ತು ಶಾಂತಿ ಸಂದೇಶದೊಂದಿಗೆ ‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಎಂಬ ಧ್ಯೇಯೋದ್ದೇಶದೊಂದಿಗೆ ಶನಿವಾರ ನಡೆದ ಸ್ವಚ್ಛತಾ ಹೀ ಸೇವಾ 2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಡಿಪಟ್ಣ– ನಡಿಪಟ್ಣ ವಿದ್ಯಾಪ್ರಸಾರ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್ ಮಾತನಾಡಿ, ಕರಾವಳಿಯ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬೀಚ್ ಸ್ವಚ್ಚವಾಗಿಟ್ಟರೆ ಬೀಚ್ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಪಡುಬಿದ್ರಿ ಮುಖ್ಯ ಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್ ಪ್ರವಾಸಿಗರನ್ನು ಆಕರ್ಷಿಸಲು ಸ್ವಚ್ಛತೆಯೇ ಕಾರಣ ಎಂದರು.

ಪಡುಬಿದ್ರಿ– ನಡಿಪಟ್ಣ ಮೊಗವೀರ ಸಭೆ ಅಧ್ಯಕ್ಷ ಅಶೋಕ್ ಸಾಲ್ಯಾನ್, ಹೆಜಮಾಡಿ ಕರಾವಳಿ ಕಾವಲು ಪಡೆಯ ರತ್ನಾಕರ, ಬ್ಲೂಫ್ಲ್ಯಾಗ್ ಬೀಚ್‌ ಮೆನೇಜರ್ ವಿಜಯ ಕುಮಾರ್ ಶೆಟ್ಟಿ, ಪಡುಬಿದ್ರಿ ಕೆಪಿಎಸ್ ಪದವಿ ಪೂರ್ವ ವಿಭಾಗದ ಸುಜಾತಾ, ವಿಶ್ರುದ್ ಕೋಸ್ಟಲ್ ಡೆವಲಪರ್ಸ್‌ ಮುಖ್ಯಸ್ಥ ಸುದೀಶ್ ಇದ್ದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT