ಬುಧವಾರ, ಏಪ್ರಿಲ್ 8, 2020
19 °C

ರೈಲುಗಳ ತಾತ್ಕಾಲಿಕ ರದ್ದು, ಸಮಯ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಉಡುಪಿ: ಫರಿದಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರವನ್ನು ಫೆ.28ರವರೆಗೆ ತಾತ್ಕಾಲಿಕವಾಗಿ ರದ್ದು ಹಾಗೂ ಸಮಯ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲು ರದ್ದು:

ಎರ್ನಾಕುಲಂ ಜಂಕ್ಷನ್‌–ನಿಜಾಮುದ್ದೀನ್ ಮಂಗಳ ಲಕ್ಷ್ಮದ್ವೀಪ ಎಕ್ಸ್‌ಪ್ರೆಸ್‌ (12617) ರೈಲು ಫೆ.23, 24, 28ರಂದು ಸಂಚರಿಸುವುದಿಲ್ಲ. ಫೆ.26, 27, 28ರಂದು ಸಂಚರಿಸಬೇಕಿದ್ದ (12618) ನಿಜಾಮುದ್ದೀನ್–ಎರ್ನಾಕುಲಂ ಜಂಕ್ಷನ್‌–ಮಂಗಳ ಲಕ್ಷ್ಮದ್ವೀಪ ಎಕ್ಸ್‌ಪ್ರೆಸ್‌, 26 ರಂದು ಓಡಬೇಕಿದ್ದ (12218) ಚಂಡಿಘಡ–ಕುಚುವೆಲಿ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌, 29ರಂದು ಹೊರಡಬೇಕಿದ್ದ 12217 ಕುಚುವೆಲಿ–ಚಂಡಿಘಡ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌, 28ರಂದು ಸಂಚರಿಸಬೇಕಿದ್ದ 22659 ಕುಚುವೆಲಿ, ಡೆಹ್ರಾಡೂನ್ ಎಕ್ಸ್‌ಪ್ರೆಸ್‌, ಮಾರ್ಚ್ 2ರಂದು ಓಡಬೇಕಿದ್ದ ಡೆಹ್ರಾಡೂನ್–ಕುಚುವೆಲಿ ಎಕ್ಸ್‌ಪ್ರೆಸ್‌, ಫೆ.24, 25, 26ರಂದು ತೆರಳಬೇಕಿದ್ದ 12779 ವಾಸ್ಕೊಡಗಾಮ–ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್‌, 26, 27, 28ರಂದು ಸಂಚರಿಸಬೇಕಿದ್ದ ನಿಜಾಮುದ್ದೀನ್‌–ವಾಸ್ಕೊಡಗಾಮ ಗೋವಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಿದೆ.

ಸಮಯ ಬದಲಾವಣೆ:

ಫೆ.27ರಂದು ತಿರುವನಂತಪುರಂ ಸೆಂಟ್ರಲ್‌–ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 2 ಗಂಟೆ ತಡವಾಗಿ, 28ರಂದು ನಿಜಾಮುದ್ದೀನ್‌–ಮಡಗಾವ್‌ ಜಂಕ್ಷನ್‌, ರಾಜಧಾನಿ ಎಕ್ಸ್‌ಪ್ರೆಸ್‌ 3.35 ಗಂಟೆ ತಡವಾಗಿ, ನಿಜಾಮುದ್ದೀನ್‌ ಮಡಗಾವ್‌ ಜಂಕ್ಷನ್‌ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 29ರಂದು 3.05 ಗಂಟೆ ತಡವಾಗಿ, ನಿಜಾಮುದ್ದೀನ್‌–ತಿರುವನಂತಪುರಂ–ಸೆಂಟ್ರಲ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಾರ್ಚ್‌ 1ರಂದು 4.15 ಗಂಟೆ ತಡವಾಗಿ, ಅಮೃತ್‌ಸರ್–ಕುಚುವೆಲಿ ಎಕ್ಸ್‌ಪ್ರೆಸ್‌ ರೈಲು ಮಾರ್ಚ್ 1ರಂದು 2 ಗಂಟೆ ತಡವಾಗಿ ನಿಲ್ದಾಣ ಬಿಡಲಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ರೈಲ್ವೆ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು