ಸೋಮವಾರ, ಜೂನ್ 14, 2021
26 °C

ಜನಾದೇಶ ಸ್ವೀಕರಿಸುವೆ: ಪ್ರಮೋದ್ ಮಧ್ವರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮೈತ್ರಿ ಕೊಟ್ಟ ಹೊಡೆತ’

ಜನಾದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್‌ ಪ್ರಬಲವಾಗಿದ್ದ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಚುನಾವಣಾ ಪೂರ್ವ ಮೈತ್ರಿ ಪೆಟ್ಟುಕೊಟ್ಟಿದೆ ಎಂದು ಎನಿಸುತ್ತಿದೆ. ಮುಂದೆ ಸೋಲಿನ ಕುರಿತು ಪರಾಮರ್ಶೆ ನಡೆಸಲಾಗುವುದು. ಪಕ್ಷವನ್ನು ಮತ್ತೆ ಸಂಘಟಿಸಲಾಗುವುದು.

–ಅಶೋಕ್ ಕೊಡವೂರು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಬಿಕಾರಿಗಳಾದ ಪ್ರತಿಪಕ್ಷಗಳು: ಮಟ್ಟಾರು

ಲೋಕಸಭಾ ಚುನಾವಣಾ ಫಲಿತಾಂಶ ಜನತೆಯ ನಿರೀಕ್ಷೆಯಂತೆ ಬಂದಿದ್ದು, ದೇಶದ ಅಭಿವೃದ್ಧಿ, ಭದ್ರತೆ, ಸಮರ್ಥ ನಾಯಕತ್ವಕ್ಕೆ ಮಣೆ ಸಿಕ್ಕಿದೆ. ಪ್ರಧಾನಿ ಹುದ್ದೆಗೆ ತುದಿಗಾಲಲ್ಲಿ ನಿಂತಿದ್ದ ಪ್ರತಿಪಕ್ಷ ನಾಯಕರು ದೂಳೀಪಟವಾಗಿದ್ದಾರೆ. ವಿಕಾರಿ ನಾಮ ಸಂವತ್ಸರದಲ್ಲಿ ಪ್ರತಿಪಕ್ಷಗಳು ಬಿಕಾರಿಯಾಗಿವೆ.

–ಮಟ್ಟಾರು ರತ್ನಾಕರ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

‘ಮತದಾರರ ತೀರ್ಪು ಸ್ವೀಕರಿಸುವೆ’

ದೇಶದಾದ್ಯಂತ ಬಿಜೆಪಿ ಅಲೆ ಜೋರಾಗಿ ಬೀಸುತ್ತಿದ್ದಾಗ ನಾವೆಲ್ಲರೂ ಅಸಹಾಯಕರಾಗಿಬಿಟ್ಟಿದ್ದೇವೆ. ಸೋಲಾದರೂ ಪ್ರಜೆಗಳೇ ಪ್ರಭುಗಳು. ಮತದಾರರು ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇನೆ.

–ಪ್ರಮೋದ್ ಮಧ್ವರಾಜ್‌, ಪರಾಜಿತ ಮೈತ್ರಿ ಅಭ್ಯರ್ಥಿ

* ಲೋಕತಂತ್ರ ವ್ಯವಸ್ಥೆಯಲ್ಲಿ ಸೋಲು–ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸುವ ಶಕ್ತಿ ವರಿಷ್ಠರಾದ ದೇವೇಗೌಡರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಜಿಲ್ಲೆಯಲ್ಲಿ ಪಕ್ಷ ಕಟ್ಟುತ್ತೇವೆ. ಮೋದಿ ಬಡವರ, ಮಧ್ಯಮವರ್ಗದ ಕೆಲಸ ಮಾಡಲಿ ಎಂದು ಆಶಿಸುತ್ತೇನೆ.

ಯೋಗೀಶ್ ಶೆಟ್ಟಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು