ಕುಂದಾಪುರ: ‘ಆರ್.ಎನ್.ಶೆಟ್ಟಿ ಸಭಾಭವನವನ್ನು ದಾನಿಗಳ ಸಹಕಾರದಿಂದ ಈಗಾಗಲೇ ಮಾತೃ ಸಂಘದ ಸಲಹೆಯಂತೆ ನವೀಕರಣಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿರುವ ಊಟದ ಸಭಾಂಗಣವನ್ನು ನವೀಕರಣಗೊಳಿಸಲು ತೀರ್ಮಾನಿಸಲಾಗಿದ್ದು, ಬೆಂಗಳೂರಿನ ಉದ್ಯಮಿ ಎಂ.ಶಿವರಾಮ ಹೆಗ್ಡೆ ಅವರು ಸಹಕಾರ ನೀಡಲು ಒಪ್ಪಿದ್ದಾರೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯುವ ವಿಶ್ವಾಸವಿದೆ ಎಂದು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ತಾಲ್ಲೂಕು ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಆವರ್ಸೆ ಹೇಳಿದರು.

ಬುಧವಾರ ಇಲ್ಲಿ ನಡೆದ ಸಮಾರಂಭದಲ್ಲಿ ಆರ್.ಎನ್.ಶೆಟ್ಟಿ ಸಭಾಭವನದ ಊಟದ ಸಭಾಂಗಣ ನವೀಕರಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದಿವಂಗತ ಆರ್.ಎನ್.ಶೆಟ್ಟಿಯವರ ಸಹಕಾರದಿಂದ ನಮ್ಮ ಸಮಾಜದ ಹಿರಿಯರು ಕಟ್ಟಿ ಬೆಳೆಸಿದ್ದ ಕುಂದಾಪುರದ ಬಂಟರ ಯಾನೆ ನಾಡವರ ಸಂರ್ಕೀರ್ಣದಲ್ಲಿನಆರ್.ಎನ್.ಶೆಟ್ಟಿ ಸಭಾಭವನವನ್ನು ನವೀಕರಿಸಲಾಗಿದೆ’ ಎಂದರು.

ಸೌತ್‌ಫೀಲ್ಡ್ ಪೈಂಟ್ಸ್ ಕಂಪನಿಯ ನಿರ್ದೇಶಕಿ ಜಯಂತಿ ಎಸ್. ಹೆಗ್ಡೆ ಹಾಗೂ ವಿದ್ಯಾ ರೈ ಅವರು ದೀಪ ಬೆಳಗಿಸಿ ನವೀಕರಣಕ್ಕೆ ಚಾಲನೆ ನೀಡಿದರು.ಸೌತ್‌ಫೀಲ್ಡ್ ಪೈಂಟ್ಸ್ ಕಂಪನಿಯ ಆಡಳಿತ ನಿರ್ದೇಶಕ ಎಂ.ಶಿವರಾಮ ಹೆಗ್ಡೆ ಹಾಗೂ ಜಯಂತಿ ಎಸ್ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಜಿ.ಕುಶಲ ಹೆಗ್ಡೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಉದಯ್‌ಕುಮಾರ ಹೆಗ್ಡೆ, ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕುಂದಾಪುರ ತಾಲ್ಲೂಕು ಸಮಿತಿಯ ಸಹ ಸಂಚಾಲಕ ವಿಕಾಸ್ ಹೆಗ್ಡೆ ಕೊಳ್ಕೆರೆ, ಮಾತೃ ಸಂಘದ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆಂಚನೂರು ಸೋಮಶೇಖರ ಶೆಟ್ಟಿ, ಚಿತ್ತರಂಜನ್ ಹೆಗ್ಡೆ ಹರ್ಕೂರು, ಸಂಪತ್‌ಕುಮಾರ ಶೆಟ್ಟಿ ಕಾವ್ರಾಡಿ, ರೋಹಿತ್‌ಕುಮಾರ ಶೆಟ್ಟಿ ಬ್ರಹ್ಮಾವರ, ನಾಮ ನಿರ್ದೇಶಿತ ಸದಸ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ಶೆಟ್ಟಿ ಗುಲ್ವಾಡಿ, ತಾಲ್ಲೂಕು ಯುವ ಬಂಟರ ಸಂಘದ ಗೌರವ ಕಾರ್ಯದರ್ಶಿ ನಿತೇಶ್ ಶೆಟ್ಟಿ ಬಸ್ರೂರು, ಸಮಾಜದ ಪ್ರಮುಖರಾದ ಬಿ.ಅರುಣ್‌ಕುಮಾರ ಶೆಟ್ಟಿ, ಸುಧಾಕರ ಶೆಟ್ಟಿ ಹುಂತ್ರಿಕೆ, ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ವಸಂತಿ ಎಂ. ಶೆಟ್ಟಿ, ವಿಜಯ್‌ಕುಮಾರ ಶೆಟ್ಟಿ ಸಟ್ವಾಡಿ, ಬುದ್ಧರಾಜ್ ಶೆಟ್ಟಿ ಮಾರ್ಕೋಡು, ಪ್ರಭಾಕರ ಶಟ್ಟಿ ಮೇಪು, ಸುಜನ್ ಶೆಟ್ಟಿ ಹಳ್ನಾಡ್, ಕೆಂಚನೂರು ಕಿಶನ್‌ಕುಮಾರ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.