ಗುರುವಾರ , ಏಪ್ರಿಲ್ 9, 2020
19 °C
ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷೆ; 14 ಗೋಷ್ಠಿಗಳು

ಮಾರ್ಚ್ 14ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 14 ಹಾಗೂ 15ರಂದು ಬ್ರಹ್ಮಾವರದ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ವೈದೇಹಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ‘ಇರುವಂತಿಕೆ’ ಶೀರ್ಷಿಕೆಯಡಿ 14 ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

14ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಲಿದ್ದು, 9.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಬರಮಾಡಿಕೊಳ್ಳಲಾಗುವುದು. 10ಕ್ಕೆ ಉದ್ಘಾಟನೆ ನೆರವೇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 12ಕ್ಕೆ ‘ಮರೆಯಲಾಗದ ಮಹನೀಯರು’ ಒಂದು ನೆನಪು ಕಾರ್ಯಕ್ರಮದಲ್ಲಿ ಡಿ.ವಿ.ಹೊಳ್ಳ, ಪ್ರೊ.ಉಪೇಂದ್ರ ಸೋಮಯಾಜಿ ಉಪಸ್ಥಿತರಿರಲಿದ್ದಾರೆ. ‘ಹಾಜಿ ಅಬ್ದುಲ್ಲಾ ಅವರ ಸೌಹಾರ್ದತೆ ಸಮಾಜ ಸೇವೆ’ ಕುರಿತು ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಬಿ.ಪಿ. ಬಾಯರಿ ‘ಭಾರತೀಯ ಕಲಾಪರಂಪರೆ’ ಕುರಿತು ಡಾ.ಭಾರತಿ ಮರವಂತೆ ಮಾತನಾಡಲಿದ್ದಾರೆ ಎಂದರು.

2.30ಕ್ಕೆ ಕವಿಗೋಷ್ಠಿ, 4.15ಕ್ಕೆ ‘ಯಕ್ಷಗಾನ ಸ್ಥಿತ್ಯಂತರ’ ಕುರಿತ ಪ್ರಸಾದ್ ಮೊಗೆಬೆಟ್ಟು ಮಾತನಾಡಲಿದ್ದಾರೆ. 5.15ಕ್ಕೆ ನೃತ್ಯ, 5.30ಕ್ಕೆ ‘ನನ್ನ ಕಥೆ, ನಿಮ್ಮ ಜತೆ’ ಕಾರ್ಯಕ್ರಮ, 6.30ಕ್ಕೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ನಡೆಯಲಿವೆ.

15ರಂದು ಬೆಳಿಗ್ಗೆ 9ಕ್ಕೆ ಉದಯರಾಗ ವೀಣಾವಾದನ, 10ಕ್ಕೆ ‘ನಡೆ ಕನ್ನಡ, ನುಡಿ ಕನ್ನಡ’ ಕುರಿತು ವಿದ್ಯಾರ್ಥಿ ಗೋಷ್ಠಿ, 11ಕ್ಕೆ ‘ಮಹಿಳೆ ಮತ್ತು ಸಾಮಾಜಿಕ ಸವಾಲುಗಳು’ ಕುರಿತು ಡಾ.ರಶ್ಮಿ ಕುಂದಾಪುರ, ‘ವೈದೇಹಿ ಬರಹದಲ್ಲಿ ಮಹಿಳಾ ಪ್ರಜ್ಞೆ’ ವಿಚಾರ ಕುರಿತು ಡಾ.ಜ್ಯೋತಿ ಚೇಳೈರು ಮಾತನಾಡಲಿದ್ದಾರೆ.

12ಕ್ಕೆ ‘ಸಮ್ಮೇಳನಾಧ್ಯಕ್ಷರ ಜತೆ ಒಂದಿಷ್ಟು ಹೊತ್ತು’ ಕಾರ್ಯಕ್ರಮ, 2ಕ್ಕೆ ‘ನಮ್ಮ ಉಡುಪಿ’, 3.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. 4ಕ್ಕೆ ‘ನನ್ನ ಭಾಷೆ, ನನ್ನ ಹೆಮ್ಮೆ’ ಸಂವಾದ, 4.30ಕ್ಕೆ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ‘ಯಕ್ಷ ಹಾಸ್ಯ: ನಾಟ್ಯ ರಸಾಯನ’ ಬಳಿಕ ಜನಪದ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ತಾಲ್ಲೂಕು ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಉಸಿರು ಕೋಟ ಸಂಸ್ಥೆಯ ವೆಂಕಟೇಶ್ ಭಟ್, ಚೇತನಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು