ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎಂಸಿ ಗ್ಲೋಬಲ್‌ ಅಲುಮಿನಿ ಅಸೋಸಿಯೇಷನ್‌ಗೆ ನೇಮಕ

Last Updated 25 ಜುಲೈ 2021, 15:44 IST
ಅಕ್ಷರ ಗಾತ್ರ

ಉಡುಪಿ: ಎಸ್‌ಡಿಎಂ ಕಾಲೇಜು ಉಜಿರೆ ಗ್ಲೋಬಲ್‌ ಅಲುಮಿನಿ ಅಸೋಸಿಯೇಷನ್‌ ಅಸ್ತಿತ್ವಕ್ಕೆ ಬಂದಿದ್ದು 2021-22 ನೇ ಸಾಲಿಗೆ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ಶನಿವಾರ ಜೂಮ್‌ ಮೂಲಕ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಒಮ್ಮತದಿಂದ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ಎಸ್‌ಡಿಎಂ ಕಾಲೇಜು ಉಜಿರೆ ಗ್ಲೋಬಲ್ ಅಲುಮಿನಿ ಅಸೋಸಿಯೇಷನ್‌ ಗೌರವಾಧ್ಯಕ್ಷರಾಗಿ ಡಾ.ಯಶೋವರ್ಮ, ಅಧ್ಯಕ್ಷರಾಗಿ ಅಬ್ದುಲ್ಲ ಮಾಡುಮೂಲೆ (ಅಬುಧಾಬಿ), ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್‌ ಬೆಂಗ್ರಾಡಿ (ದುಬೈ), ಉಪಾಧ್ಯಕ್ಷರಾಗಿ ದಿನೇಶ್‌ ಹೆಗ್ಡೆ (ಅಮೆರಿಕಾ), ಖಜಾಂಚಿಯಾಗಿ ರೋಷನ್‌ ಪಿಂಟೊ (ದುಬೈ), ಮಾಧ್ಯಮ ಸಂವಹನ ಸಂಚಾಲಕರಾಗಿ ಅಬ್ದುಲ್ ರಜಾಕ್‌ (ದುಬೈ), ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ (ಮಲೇಷಿಯಾ), ಇನ್‌ಫಾರ್ಮೆಷನ್ ಟೆಕ್ನಾಲಜಿ ಕಾರ್ಯದರ್ಶಿಯಾಗಿ ಶರತ್‌ ಪಿಳಗಿ (ಜರ್ಮನಿ) ಅವರನ್ನು ಆಯ್ಕೆ ಮಾಡಲಾಗಿದೆ.

ಧರ್ಮಸ್ಥಳದ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಅವರು ಎಸ್‌ಡಿಎಂಸಿಯು ಗ್ಲೋಬಲ್‌ ಅಲುಮಿನಿ ಅಸೋಸಿಯೇಷನ್‌ ಪೋಷಕರಾಗಿರಲಿದ್ದಾರೆ. ಮೊಹಮ್ಮದ್ ಕುತುಬ್‌ದಿನ್‌ (ದುಬೈ), ಲಕ್ಷ್ಮಿಕಾಂತ್‌ (ಓಮನ್‌), ಶ್ರುತಿ (ಆಸ್ಟ್ರೇಲಿಯ), ಚೇತನಾ ಹೆಗ್ಡೆ (ಬಹರೇನ್‌), ಅಬ್ದುಲ್ ಖಾದರ್ (ದುಬೈ) ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿರಲಿದ್ದಾರೆ. ಡಾ.ಸತೀಶ್ಚಂದ್ರ, ಡಾ.ಉದಯ್‌ಚಂದ್ರ, ಶಶಿಶೇಖರ ಎನ್‌. ಡಾ.ಜಯಕುಮಾರ್ ಶೆಟ್ಟಿ ಅವರನ್ನು ಸಲಹಾ ಮಂಡಳಿಗೆ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT