ಹೆಬ್ರಿ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅಂಡಾರಿನ ಶಯನ್ ನಾಯಕ್ (22) ಮೃತಪಟ್ಟಿದ್ದಾರೆ. ಫೆಬ್ರುವರಿ 11ರಂದು ಶಯನ್ ಅವರು ಕಾರ್ಕಳ ಭಾಗದಿಂದ ಅಂಡಾರು ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ರಾತ್ರಿ 1.20ರ ವೇಳೆ ಮರ್ಣೆ ಗ್ರಾಮದ ಕೊಂಬಗುಡ್ಡೆಯ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.