ಬುಧವಾರ, ಜನವರಿ 29, 2020
24 °C

ಹಿರಿಯ ಲೇಖಕ, ಸಂಘಟಕ ಎಂ. ರಾಮಚಂದ್ರ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಲೇಖಕ, ಸಂಘಟಕ ಪ್ರೊ. ಎಂ. ರಾಮಚಂದ್ರ (80) ಶುಕ್ರವಾರ ಮುಂಜಾನೆ ಹೃದಯಘಾತದಿಂದ ನಿಧನರಾಗಿದ್ದಾರೆ.

‘ಎಂ.ಆರ್‌.’ ಎಂದೇ ಜನಪ್ರಿಯರಾಗಿದ್ದ ರಾಮಚಂದ್ರ ಅವರು ಸಂಶೋಧನೆ, ಸಾಹಿತ್ಯ, ವಿಮರ್ಶೆ, ಉಪನ್ಯಾಸ, ಸಂಘಟನೆ, ಪತ್ರಿಕೋದ್ಯಮದಲ್ಲೂ ಹೆಸರು ಗಳಿಸಿದ್ದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಸುಳ್ಯದ ಮಂಡೆಕೋಲು ಜನಿಸಿದ್ದ ಅವರು ಕಾರ್ಕಳದಲ್ಲಿ ನೆಲೆಸಿದ್ದರು.

ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು