ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಉಡುಪಿ | ಮುಗಿಯದ ಸರ್ವೀಸ್ ರಸ್ತೆ ಗೋಳು

Published : 29 ಜನವರಿ 2024, 7:01 IST
Last Updated : 29 ಜನವರಿ 2024, 7:01 IST
ಫಾಲೋ ಮಾಡಿ
Comments
ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ಸರ್ವೀಸ್ ರಸ್ತೆ ಇಲ್ಲದೆ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು
ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ಸರ್ವೀಸ್ ರಸ್ತೆ ಇಲ್ಲದೆ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು
‘ವರದಿ ಸಲ್ಲಿಕೆ’
ರಾಷ್ಟ್ರೀಯ ಹೆದ್ದಾರಿ 66ರ ವ್ಯಾಪ್ತಿಯಲ್ಲಿ 17 ಬ್ಲಾಕ್‌ ಸ್ಪಾಟ್‌ಗಳಿದ್ದು ಅಪಘಾತಗಳ ತಡೆಗೆ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆದ್ದಾರಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಸುರಕ್ಷತಾ ಕ್ರಮಗಳ ಪಾಲನೆಯಾಗಿದ್ದರೆ ಬಹಳಷ್ಟು ಕಡೆ ಪಾಲನೆಯಾಗಬೇಕಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತೊಮ್ಮೆ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು ಎಂದು ಎಸ್‌ಪಿ ಕೆ.ಅರುಣ್‌ ಹೇಳಿದರು. 
‘ಸರ್ವೀಸ್‌ ರಸ್ತೆ ಬೇಡಿಕೆ ಪರಿಶೀಲನೆ’
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಇದೆ. ಕಿನ್ನಿಮೂಲ್ಕಿಯಿಂದ ಕಟಪಾಡಿವರೆಗೂ ಸರ್ವೀಸ್‌ ರಸ್ತೆ ಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸುವಂತೆ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳ ಪಾಲನೆಯ ಮೂಲಕ ಅಪಘಾತಗಳ ತಡೆಗೂ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಪಡುಬಿದ್ರಿ ಕಥೆ ವ್ಯಥೆ
ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಿಂದ ಕಟಪಾಡಿವರೆಗೆ ಬಹುತೇಕ ಸ್ಥಳಗಳಲ್ಲಿ ಸರ್ವೀಸ್ ರಸ್ತೆಗಳು ಇಲ್ಲ. ಹೆಜಮಾಡಿಯ ಒಳರಸ್ತೆ ಸಂಪರ್ಕಿಸುವುದಕ್ಕೆ ಕನ್ನಂಗಾರ್‌ನಿಂದ ಪಡುಬಿದ್ರಿಯ ಬೀಡು ಬಳಿಯ ಸುಜ್ಲಾನ್ ಗೇಟ್ ಬಳಿ ಸೇವಾ ರಸ್ತೆಗಳು ಇಲ್ಲ. ಪರಿಣಾಮ ವಾಹನಗಳು ವಿರುದ್ಧ ಧಿಕ್ಕಿನಲ್ಲಿ ಸಂಚರಿಸುತ್ತವೆ. ಈ ಭಾಗದಲ್ಲಿ ಹಲವು ಅಪಘಾತಗಳು ನಡೆದಿವೆ. ಸೇವಾ ರಸ್ತೆಯ ಸಮಸ್ಯೆಯನ್ನು ಮನಗಂಡು ಕನ್ನಂಗಾರ್ ಬೈಪಾಸ್‌ನಿಂದ ಪಡುಬಿದ್ರಿವರೆಗೆ 350 ಮೀಟರ್ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಆಗ್ರಹಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಭಾಗದಲ್ಲಿ ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ಏಳು ವರ್ಷಗಳಲ್ಲಿ 36 ಅಪಘಾತಗಳು ನಡೆದಿವೆ. ಎಂಟು ಮಂದಿ ಮೃತಪಟ್ಟದ್ದಾರೆ. 54 ಮಂದಿ ಗಾಯಗೊಂಡಿದ್ದಾರೆ. ಪಡುಬಿದ್ರಿಯಲ್ಲೂ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಎರ್ಮಾಳು ಕಲ್ಸಂಕದಿಂದ ಉಚ್ಚಿಲ ಬಡಾದವರೆಗೂ ಹಾಗೂ ಮೂಳೂರಿನಿಂದ ಕಾಪುವಿನವರೆಗೂ ಹಾಗೂ ಕೈಪುಂಜಾಲುವಿನಿಂದ ಕಟಪಾಡಿವರೆಗೂ ಸರ್ವೀಸ್ ರಸ್ತೆಯ ಅಗತ್ಯತೆ ಇದೆ ಎಂಬುವುದು ಈ ಭಾಗದ ಜನರ ಆಗ್ರಹ.
ಅಪಘಾತಕ್ಕೆ ಆಹ್ವಾನ
ಬ್ರಹ್ಮಾವರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಒಂದು ಕಿ.ಮೀನಷ್ದು ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಅಗತ್ಯವಿದ್ದರೂ ಬಸ್‌ ನಿಲ್ದಾಣದ ಬಳಿ ಮಾತ್ರ ನಿರ್ಮಿಸಲಾಗಿದೆ. ನಗರದಲ್ಲಿರುವ ಖಾಸಗಿ ಆಸ್ಪತ್ರೆ ಶಿಕ್ಷಣ ಸಂಸ್ಥೆಗಳು ಬ್ಯಾಂಕ್ ಎಲ್.ಐ.ಸಿ ಕಚೇರಿಗಳು ನಗರದ ಹೊರ ಭಾಗದಲ್ಲಿದ್ದು ಅಲ್ಲಿಗೆ ಸಾಗಲು ಸರ್ವಿಸ್ ರಸ್ತೆ ಅತಿ ಅಗತ್ಯವಾಗಿದೆ. ಆದರೂ ಬಸ್‌ ನಿಲ್ದಾಣದಿಂದ ಕೇವಲ 500 ಮೀ ವರೆಗೆ ಮಾತ್ರ ಸೇವಾ ರಸ್ತೆ ನಿರ್ಮಿಸಿ ಹೆದ್ದಾರಿ ಇಲಾಖೆ‌ ಕಣ್ಮುಚ್ಚಿ  ಕುಳಿತುಕೊಂಡಿದೆ. ಬ್ರಹ್ಮಾವರದಿಂದ ಮಾಬುಕಳದ ತನಕ ಸಾಸ್ತಾನ ಪೇಟೆಯಿಂದ ಟೋಲ್‌ತನಕ ಸಾಲಿಗ್ರಾಮದಿಂದ ಕಾರ್ಕಡ ರಸ್ತೆವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಬ್ರಹ್ಮಾವರದಿಂದ ರುಡ್ ಸೆಟ್‌ವರೆಗೆ ಸರ್ವಿಸ್ ರಸ್ತೆ ನಿರ್ಮಾಣವಾದರೆ ಹೊನ್ನಾಳಕ್ಕೆ ಸಾಗುವವರಿಗೂ ಉಪಯೋಗವಾಗಲಿದೆಸಾಲಿಗ್ರಾಮದಿಂದ ಚೇಂಪಿಯವರೆಗೆ ಸರ್ವಿಸ್ ರಸ್ತೆ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದರೂ ಈಡೇರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT