ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ | ಡೋನ್ ಬಾಸ್ಕೊ: ‘ನಮ್ಮ ನಡೆ ಕೃಷಿ ಕಡೆ’

Published 17 ಆಗಸ್ಟ್ 2024, 6:01 IST
Last Updated 17 ಆಗಸ್ಟ್ 2024, 6:01 IST
ಅಕ್ಷರ ಗಾತ್ರ

ಶಿರ್ವ: ಇಲ್ಲಿನ ಡೋನ್ ಬಾಸ್ಕೊ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ಸ್, ಗೈಡ್ಸ್‌ನ 100 ವಿದ್ಯಾರ್ಥಿಗಳಿಗೆ ಹೇರೂರು ಬಂಟಕಲ್ಲು ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಕೃಷಿಕ, ಮಜೂರು ಗ್ರಾ.ಪಂ. ಸದಸ್ಯ ವಿಜಯ್ ಧೀರಜ್‌ ಅವರ ಗದ್ದೆಯಲ್ಲಿ ‘ನಮ್ಮ ನಡೆ ಕೃಷಿ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿದ್ಯಾ್ಥಿಗಳು ಕೆಸರುಗದ್ದೆಯಲ್ಲಿ ರೈತರ ಕಾಯಕವನ್ನು ಪ್ರತ್ಯಕ್ಷವಾಗಿ ನೋಡಿ ಕೃಷಿ ಕಾಯಕದ ಅನುಭವ ಪಡೆದುಕೊಂಡರು. ಗದ್ದೆಗಿಳಿದು ಹದ ಮಾಡಿದ ಗದ್ದೆಯಲ್ಲಿ ನೇಜಿ ನೆಟ್ಟರು. ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಸಮೀಪದ ಕೆರೆಗೆ ಇಳಿದು ಜಲಕ್ರೀಡೆ ಆಡಿದರು.

ಸ್ಥಳೀಯ 75ಕ್ಕೂ ಅಧಿಕ ಗ್ರಾಮಸ್ಥರು, ಬಂಟಕಲ್ಲು ಲಯನ್ಸ್ ಸದಸ್ಯರು ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಶಾಲೆಯ ಸ್ಕೌಟ್ಸ್, ಗೈಡ್ಸ್ ಶಿಕ್ಷಕರು ನೇತೃತ್ವ ವಹಿಸಿದ್ದರು.

ವಿಜಯ್‌ ಧೀರಜ್ ಮಾತನಾಡಿ, ರೈತರು ಹೇಗೆ ಬದುಕು ಸಾಗಿಸುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡುವುದರ ಜೊತೆಗೆ, ನಾವು ಊಟ ಮಾಡುವ ಅನ್ನ ಹೇಗೆ, ಎಲ್ಲಿ ತಯಾರಾಗುತ್ತದೆ ಎಂಬ ಜ್ಞಾನ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸೇಂಟ್‌ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲೆಸ್ಲಿ ಮಾತನಾಡಿ, ದೇಶದ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ಸೈನಿಕರು, ರೈತರನ್ನು ಹೇಗೆ ಗೌರವಿಸಬೇಕು ಎಂದು ತಿಳಿಸಿದ್ದಾರೆ. ಮಕ್ಕಳು ಕೃಷಿ ಬಗ್ಗೆ ಹೊಸ ಅನುಭವ ಪಡೆದಿದ್ದಾರೆ ಎಂದರು.

ಬಂಟಕಲ್ಲು ಲಯನ್ಸ್ ಅಧ್ಯಕ್ಷ ಉಮೇಶ್ ಕುಲಾಲ್ ಶುಭ ಹಾರೈಸಿದರು. ಪ್ರಾಂಶುಪಾಲ ಫಾ. ರೊಲ್ವಿನ್ ಜೋಯ್ ಅರಾನ್ಹಾ ಮಾತನಾಡಿದರು. ಅಶ್ವಿನಿ ಸಿಯೋನಾ ಸಲ್ಡಾನ್ಹಾ ನಿರೂಪಿಸಿದರು. ಲಯನ್ ಜೋಸಿಲ್ ನೊರೋನ್ಹಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT