ಬೈಂದೂರು: ಐದನೇ ರಾಷ್ಟ್ರೀಯ ಸಮುದ್ರ ಮೀನುಗಾರಿಕೆ ಸೆನ್ಸಸ್ 2025 ‘ಸ್ಮಾರ್ಟ್ ಮೀನುಗಾರಿಕೆಗಾಗಿ ಸ್ಮಾರ್ಟ್ ಸೆನ್ಸಸ್’ ಸಮುದ್ರ ಮೀನುಗಾರಿಕೆ ಗಣತಿಯ ಮಾಹಿತಿ ಪತ್ರವನ್ನು ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಚಂದ್ರ ಬಿಡುಗಡೆಗೊಳಿಸಿದರು.

ಸಮುದ್ರ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಉದ್ದೇಶಿಸಿ ರಾಷ್ಟ್ರೀಯ ಸಮುದ್ರ ಮೀನುಗಾರಿಕೆ ಗಣತಿ 2025 ಅನ್ನು ನವೆಂಬರ್ 3ರಿಂದ 18 ಡಿಸೆಂಬರ್ ರವರೆಗೆ ಭಾರತದ ಎಲ್ಲ ಕರಾವಳಿ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಅಂಡಮಾನ್ನಲ್ಲಿ ನಡೆಸಲಾಗುತ್ತದೆ.

ಕೇಂದ್ರ ಮೀನುಗಾರಿಕೆ ಸಚಿವಾಲಯದ ವತಿಯಿಂದ, ಭಾರತದ ನಾಲ್ಕು ಸಾವಿರ ಕರಾವಳಿ ಗ್ರಾಮಗಳಲ್ಲಿ ವಾಸಿಸುವ 12 ಲಕ್ಷಕ್ಕೂ ಅಧಿಕ ಮೀನುಗಾರ ಕುಟುಂಬಗಳನ್ನು ಒಳಗೊಂಡು ಈ ಮಾಹಿತಿ ಸಂಗ್ರಹಣಾ ಯೋಜನೆಯನ್ನು ಐಸಿಎಆರ್ - ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಮ್ಎಫ್ಆರ್ಐ) ನಡೆಸುತ್ತದೆ.

ಅಧಿಕೃತ ತರಬೇತಿ ಪಡೆದ ಅನುಮೋದಿತ ಗಣತಿದಾರರು ಈ ಅವಧಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಸಿಎಂಎಫ್ಆರ್ಐ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಬಳಸಿ ಮಾಹಿತಿ ಸಂಗ್ರಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.