ಕುಂದಾಪುರ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೋಟೇಶ್ವರದ ಕುಂಬ್ರಿಯ ಸಾಫ್ಟ್‌ವೇರ್ ಎಂಜಿಯರ್ ಮಂಗಳವಾರ ಕುಂದಾಪುರಕ್ಕೆ ಬಂರುತ್ತಿದ್ದಾಗ ಬಸ್ಸಿನಲ್ಲೇ ಮೃತಪಟ್ಟಿದ್ದಾರೆ.

ಕೋಟೇಶ್ವರದ ಕುಂಬ್ರಿಯಲ್ಲಿ ನೆಲೆಸಿರುವ ಬ್ರಹ್ಮಾವರದ ಬಿರ್ತಿಯ ವಿಷ್ಣುಮೂರ್ತಿ ಆಚಾರಿ ಅವರ ಪುತ್ರ ಚೈತನ್ಯ (25) ಮೃತರು. ಕೋವಿಡ್–19 ಕಾರಣದಿಂದ ವೃತ್ತಿಯಲ್ಲಿದ್ದ್ ಕಂಪನಿಯಲ್ಲಿ ಕೆಲಸ ಕಡಿಮೆಯಾಗಿ ಊರಿಗೆ ಬರುತ್ತಿರುವುದಾಗಿ ತಿಳಿಸಿದ್ದ ಅವರು, ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಬಂದಿದ್ದರು. ಮಂಗಳವಾರ ಬೆಳಿಗ್ಗೆ 6.30 ಕ್ಕೆ ಮನೆಗೆ ಕರೆ ಮಾಡಿದ್ದ ಅವರು ಬಾರ್ಕೂರು ಸಮೀಪದಲ್ಲಿ ಬರುತ್ತಿರುವುದಾಗಿ ತಿಳಿಸಿದ್ದರು.

ಕೋಟೇಶ್ವರದಲ್ಲಿ ಚೈತನ್ಯ ಇಳಿಯದೆ ಇದ್ದುದರಿಂದ ಬಸ್‌ನ ಕಂಡಕ್ಟರ್ ಅವರ ಬಳಿಗೆ ತೆರಳಿದ್ದರು. ಆಗ ಅವರು ಅಸ್ವಸ್ಥರಾಗಿ ಮಲಗಿರುವುದು ತಿಳಿದು ಬಂದಿತ್ತು. ಕೂಡಲೇ ಮನೆಯವರಿಗೆ ವಿಷಯ ತಿಳಿಸಿ, ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚೈತನ್ಯ ಅದಾಗಲೇ ಮೃತರಾಗಿರುವುದನ್ನು ವೈದ್ಯರು ಅಲ್ಲಿನ ದೃಢಪಡಿಸಿದರು.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.