ಸೋಮವಾರ, ಸೆಪ್ಟೆಂಬರ್ 20, 2021
27 °C
‘ಎ’ ಪ್ಲಸ್‌ ಶ್ರೇಣಿ ಪಡೆದ 872 ಬಾಲಕಿಯರು, 467 ಬಾಲಕರು

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ- ಹೆಣ್ಮಕ್ಕಳೇ ಮುಂದು

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಜಿಲ್ಲೆಯ ಎಲ್ಲ 13,320 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಪಡೆದಿದ್ದಾರೆ. 625 ಅಂಕಗಳನ್ನು ಪಡೆದ ಜಿಲ್ಲೆಯ 11 ವಿದ್ಯಾರ್ಥಿಗಳಲ್ಲಿ 6 ಬಾಲಕಿಯರಿದ್ದು, ಐವರು ಬಾಲಕರು ಇದ್ದಾರೆ.

ಹೆಣ್ಮಕ್ಕಳೇ ಮುಂದು: ಜಿಲ್ಲೆಯಲ್ಲಿ ‘ಎ’ ಪ್ಲಸ್‌ ಶ್ರೇಣಿ ಪಡೆದ 1,339 ವಿದ್ಯಾರ್ಥಿಗಳ ಪೈಕಿ 872 ಬಾಲಕಿಯರು ಇದ್ದರೆ, 467 ಬಾಲಕರು ಇದ್ದಾರೆ. ‘ಎ’ ಶ್ರೇಣಿ ಪಡೆದ 2,260 ವಿದ್ಯಾರ್ಥಿಗಳಲ್ಲಿ 1,306 ಬಾಲಕಿಯರು, 954 ಬಾಲಕರು ಇದ್ದಾರೆ.  ‘ಬಿ’ ಶ್ರೇಣಿ ಪಡೆದ 5,863 ವಿದ್ಯಾರ್ಥಿಗಳಲ್ಲಿ 2,920 ಹುಡುಗಿಯರು, 2,943 ಹುಡುಗರಿದ್ದಾರೆ. ‘ಸಿ’ ಶ್ರೇಣಿ ಪಡೆದ 3,858 ವಿದ್ಯಾರ್ಥಿಗಳಲ್ಲಿ 2,472 ಬಾಲಕರು ಹಾಗೂ 1,386 ಬಾಲಕಿಯರು ಇದ್ದಾರೆ.

ಶ್ರೇಣಿವಾರು ಫಲಿತಾಂಶ ನೋಡುವುದಾರೆ ಸರ್ಕಾರಿ ಶಾಲೆಯಲ್ಲಿ ಓದಿದ 384 ವಿದ್ಯಾರ್ಥಿಗಳು ‘ಎ’ ಪ್ಲಸ್‌ ಪಡೆದಿದ್ದು, ಅನುದಾನಿತ ಶಾಲೆಗಳ 195 ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆಗಳ 755 ವಿದ್ಯಾರ್ಥಿಗಳು ‘ಎ’ ಪ್ಲಸ್‌ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 875 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ಎ’ ಶ್ರೇಣಿ ಪಡೆದರೆ, ಅನುದಾನಿತ ಶಾಲೆಗಳ 421 ಹಾಗೂ ಖಾಸಗಿ ಶಾಲೆಗಳ 964 ವಿದ್ಯಾರ್ಥಿಗಳು ‘ಎ’ ಶ್ರೇಣಿ ಪಡೆದುಕೊಂಡಿದ್ದಾರೆ.

‘ಬಿ’ ಶ್ರೇಣಿ ಪಡೆದವರಲ್ಲಿ ಸರ್ಕಾರಿ ಶಾಲೆಗಳ 2,742, ಅನುದಾನಿತ ಶಾಲೆಗಳ 1,294, ಹಾಗೂ ಖಾಸಗಿ ಶಾಲೆಗಳ 1,827 ವಿದ್ಯಾರ್ಥಿಗಳಿದ್ದಾರೆ. ‘ಸಿ’ ಶ್ರೇಣಿ ಪಡೆದವರಲ್ಲಿ ಸರ್ಕಾರಿ ಶಾಲೆಗಳ 2,029, ಅನುದಾನಿತ ಶಾಲೆಗಳ 1,140 ಹಾಗೂ ಖಾಸಗಿ ಶಾಲೆಗಳ 689 ವಿದ್ಯಾರ್ಥಿಗಳು ಇದ್ದಾರೆ.

ಕುಂದಾಪುರ ಪ್ರಥಮ:

‘ಎ’ ಪ್ಲಸ್‌ ಶ್ರೇಣಿ ಹೆಚ್ಚು ಪಡೆದ ತಾಲ್ಲೂಕುಗಳಲ್ಲಿ ಕುಂದಾಪುರ ಮುಂದಿದ್ದು, ಇಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 330 ವಿದ್ಯಾರ್ಥಿಗಳು ‘ಎ’ ಪ್ಲಸ್ ಶ್ರೇಣಿ ಪಡೆದರೆ, ನಂತರದ ಸ್ಥಾನಗಳಲ್ಲಿ ಉಡುಪಿ ದಕ್ಷಿಣ 363, ಕಾರ್ಕಳ 266, ಉಡುಪಿ ಉತ್ತರ 245 ಹಾಗೂ ಬೈಂದೂರು 135 ಕೊನೆಯ ಸ್ಥಾನದಲ್ಲಿದೆ.

ಉಡುಪಿ ದಕ್ಷಿಣ ಫಸ್ಟ್‌:

‘ಎ’ ಶ್ರೇಣಿ ಪಡೆದ ವಲಯಗಳಲ್ಲಿ ಉಡುಪಿ ದಕ್ಷಿಣ ಮುಂದಿದ್ದು ಇಲ್ಲಿನ 543‌ ವಿದ್ಯಾರ್ಥಿಗಳು ಎ ಶ್ರೇಣಿ ಪಡೆದಿದ್ದು, ಉಡುಪಿ ಉತ್ತರ 514, ಕುಂದಾಪುರ 490, ಕಾರ್ಕಳ 425 ಹಾಗೂ ಬೈಂದೂರಿನ 288 ವಿದ್ಯಾರ್ಥಿಗಳು ಎ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.

ಉಡುಪಿ ದಕ್ಷಿಣ ವಲಯದ 1,442, ಉತ್ತರ ವಲಯದ 1178, ಕಾರ್ಕಳ ತಾಲ್ಲೂಕಿನ 1150, ಕುಂದಾಪುರ ತಾಲ್ಲೂಕಿನ 1133 ಹಾಗೂ ಬೈಂದೂರು ತಾಲ್ಲೂಕಿನ 960 ವಿದ್ಯಾರ್ಥಿಗಳು ಬಿ ಶ್ರೇಣಿ ಪಡೆದಿದ್ದಾರೆ. ಉಡುಪಿ ದಕ್ಷಿಣದ 982, ಉತ್ತರ ವಲಯದ 775, ಕಾರ್ಕಳ ತಾಲ್ಲೂಕಿನ 776, ಕುಂದಾಪುರ ತಾಲ್ಲೂಕಿನ 672 ಹಾಗೂ ಬೈಂದೂರು ತಾಲ್ಲೂಕಿನ 653 ವಿದ್ಯಾರ್ಥಿಗಳು ‘ಸಿ’ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು