ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳೇ ಶಿಕ್ಷಕರು ಪ್ರಾಂಶುಪಾಲರು !

ಕಲ್ಯಾಣಪುರದ ಮಿಲಾಗ್ರಿಸ್‌ ಕಾಲೇಜಿನಲ್ಲಿ ವಿಭಿನ್ನ ಪ್ರಯತ್ನ
Last Updated 8 ಆಗಸ್ಟ್ 2022, 16:00 IST
ಅಕ್ಷರ ಗಾತ್ರ

ಉಡುಪಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿಯುತವಾಗಿ ಆಡಳಿತನಿಭಾಯಿಸುವಗುಣಗಳನ್ನುಬೆಳೆಸುವಸಲುವಾಗಿಕಲ್ಯಾಣಪುರದ ಮಿಲಾಗ್ರಿಸ್‌ಕಾಲೇಜಿನಲ್ಲಿಸೋಮವಾರ ವಿಭಿನ್ನಪ್ರಯತ್ನನಡೆಯಿತು.

ಸಾಮಾನ್ಯವಾಗಿ ಶಿಕ್ಷಕರು ಕಾಲೇಜಿನಲ್ಲಿ ಪಾಠ ಮಾಡಿದರೆ, ಸೋಮವಾರ ಮಾತ್ರ ಒಂದು ದಿನದ ಮಟ್ಟಿಗೆ ವಿದ್ಯಾರ್ಥಿಗಳು ಶಿಕ್ಷಕರಾಗಿದ್ದರು. ಅಷ್ಟೆ ಅಲ್ಲ ರಿಸೆಪ್ಷನಿಸ್ಟ್‌, ಗ್ರಂಥಾಲಯ ಅಧಿಕಾರಿ, ಪ್ರಾಂಶುಪಾಲ ಹಾಗೂ ಕಾಲೇಜಿನ ಡೀನ್‌ ಆಗಿ ಕರ್ತವ್ಯ ನಿರ್ವಹಿಸಿದರು. ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ವಿದ್ಯಾರ್ಥಿಗಳ ಮೊಗದಲ್ಲಿ ಆತ್ಮವಿಶ್ವಾಸ, ಸಂತಸ ಎದ್ದು ಕಾಣುತ್ತಿತ್ತು.

ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿ ಸುಚಿತಾ ಎಸ್‌.ನಾಯಕ್‌ ಡೀನ್‌ ಆಗಿದ್ದರು. ತರಗತಿಯಲ್ಲಿ ಪಾಠ ಮಾಡಿ ಸಹಪಾಠಿಗಳಿಂದ ಮೆಚ್ಚುಗೆ ಪಡೆದರು. ಆತಂಕವಿಲ್ಲದೆ ತರಗತಿಯೊಳಗೆ ಪಾಠ ಮಾಡಿದ್ದು ನನ್ನೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಂತಹ ವಿಭಿನ್ನ ಅನುಭವ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಜಿಮಸನ್‌ ಬ್ಲೆನ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಪ್ರಾಂಶುಪಾಲರಾಗಿ ಇಡೀ ಕಾಲೇಜಿನ ಜವಾಬ್ದಾರಿ ನಿಭಾಯಿಸುವ ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಹೊಸ ಅನುಭವ ನಿಜಕ್ಕೂ ಖುಷಿ ನೀಡಿದೆ. ನನ್ನೊಳಗಿನ ನಾಯಕತ್ವ ಗುಣಗಳು, ನಿರ್ವಹಣಾ ಕೌಶಲ ಹಾಗೂ ವೃತ್ತಿಪರತೆ ಗುಣಗಳು ಅನಾವರಣಗೊಳ್ಳಲು ಸೂಕ್ತ ವೇದಿಕೆ ದೊರೆಯಿತು ಎಂದು ಸಂತಸ ವ್ಯಕ್ತಪಡಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥನಾಗಿ ಕ್ಲಿಫ್ಟನ್‌ ಡಿಸಿಲ್ವಾ ಜವಾಬ್ದಾರಿ ನಿಭಾಯಿಸಿ ‘180 ವಿದ್ಯಾರ್ಥಿಗಳನ್ನೊಳಗೊಂಡ ಅತಿದೊಡ್ಡ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಿದ್ದು ಖುಷಿ ಕೊಟ್ಟಿದೆ. ವಿಭಾಗದ ಮುಖ್ಯಸ್ಥರ ಕಾರ್ಯ ನಿರ್ವಹಣೆ ಅರಿಯಲು ಸಹಕಾರಿಯಾಯಿತು’ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವಾ ‘ಮಿಲಾಗ್ರಿಸ್‌ ಕಾಲೇಜಿನ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪನೆಯಾದ ದಿನ ಇದಾಗಿದ್ದು, ಶಿಕ್ಷಕರ ಹಾಗೂ ಸಿಬ್ಬಂದಿಯ ನೆರವಿಲ್ಲದೆ ವಿದ್ಯಾರ್ಥಿಗಳೇ ಕಾಲೇಜನ್ನು ಸಂಪೂರ್ಣವಾಗಿ ಮುನ್ನಡೆಸಿದ್ದು ವಿದ್ಯಾರ್ಥಿಗಳಲ್ಲಿರುವ ವೃತ್ತಿಪರತೆಯ ಗುಣವನ್ನು ಅನಾವರಣಗೊಳಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT