ಗುರುವಾರ , ಆಗಸ್ಟ್ 18, 2022
25 °C
'ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ'

ಏಕ ಕಾಲದಲ್ಲಿ ಎರಡು ಪದವಿ ಅವಕಾಶ: ಕೆಎಸ್‌ಒಯು

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಸಿಗಬೇಕು, ದೂರ ಶಿಕ್ಷಣ ಎಲ್ಲರ ಕೈಗೆಟುಕಬೇಕು ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನ ಮಾಡುವ ಅವಕಾಶವನ್ನು ಎಲ್ಲರ ಮುಂದೆ ತೆರೆದಿಟ್ಟಿದೆ.

ಎರಡೆರಡು ಕೋರ್ಸ್‌ ಕಲಿಕೆಗೆ ಅವಕಾಶ: ಏಕ ಕಾಲದಲ್ಲಿ ಎರಡು ಕೋರ್ಸ್‌ಗಳನ್ನು ಕಲಿಯುವ ಅವಕಾಶವನ್ನು ಯುಜಿಸಿ ವಿದ್ಯಾರ್ಥಿಗಳಿಗೆ ನೀಡಿದೆ. ಅಂದರೆ, ಪಿಯುಸಿ ಮುಗಿಸಿದ ಬಳಿಕ ಡಿಪ್ಲೊಮಾ ಕಾಲೇಜು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಕೆಎಸ್‌ಒಯು ದೂರ ಶಿಕ್ಷಣದ ಮೂಲಕ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಯಾವುದೇ ಪದವಿ ಪಡೆಯಬಹುದು.

ಹಾಗೆಯೇ, ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿರುವ ವಿದ್ಯಾರ್ಥಿಗಳು ಕೆಎಸ್‌ಒಯುನಲ್ಲಿ ಬಿಸಿಎ ಪದವಿ ಪಡೆಯಬಹುದು. ಎಂಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳು ಎಂಬಿಎ ಸ್ನಾತಕೋತ್ತರ ಪದವಿ ಪಡೆಯಬಹುದು. ಹೀಗೆ, ಒಂದೇ ಅವಧಿಯಲ್ಲಿ ಎರಡೆರಡು ಪದವಿಗಳನ್ನು ಪಡೆದುಕೊಳ್ಳಬಹುದು.

ನೇರ ಪ್ರವೇಶ: ಬಿಎ, ಬಿಎಸ್‌ಸಿ, ಬಿಕಾಂ ಹೀಗೆ ಪ್ರಥಮ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ವೈಯಕ್ತಿಕ ಕಾರಣಗಳಿಂದ ಮುಂದಿನ 2 ವರ್ಷಗಳ ಶಿಕ್ಷಣವನ್ನು ಕಾಲೇಜಿನಲ್ಲಿ ಪಡೆಯಲು ಸಾಧ್ಯವಾಗದಿದ್ದರೆ ಅಂಥವರು ಕೆಎಸ್‌ಒಯುನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶವಿದೆ.

ಮೊದಲ ವರ್ಷದ ಪದವಿಯಲ್ಲಿ ಉತ್ತೀರ್ಣರಾಗಿದ್ದವರು ಉಳಿಕೆ 2 ವರ್ಷಗಳನ್ನು ದೂರ ಶಿಕ್ಷಣದಲ್ಲಿ ಪಯಡೆಬಹುದು. ಭೌತಿಕ ಕಲಿಕೆಯಲ್ಲಿ (ಕಾಲೇಜಿಗೆ ಹೋಗಿ) ಪಡೆಯುವ ಪದವಿಗೂ ಕೆಎಸ್‌ಒಯುನಿಂದ ಪಡೆಯುವ ಪದವಿಗೂ ಯಾವುದೇ ವ್ಯತ್ಯಾಸಗಳು ಇರುವುದಿಲ್ಲ ಎನ್ನುತ್ತಾರೆ ಕರಾಮುವಿ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ.ಕೆ.ಪಿ.ಮಹಾಲಿಂಗಯ್ಯ.

ವರ್ಷಪೂರ್ತಿ ಪ್ರವೇಶಾತಿ: ವರ್ಷಪೂರ್ತಿ ಕೆಎಸ್‌ಒಯುನಲ್ಲಿ ದಾಖಲಾತಿ ಪಡೆಯಬಹುದು. ಜನವರಿಯಿಂದ ಜೂನ್‌ ಹಾಗೂ ಜುಲೈನಿಂದ ಡಿಸೆಂಬರ್‌ವರೆಗೂ 2 ಆವೃತ್ತಿಗಳಲ್ಲಿ ದಾಖಲಾತಿಗೆ ಅವಕಾಶ ಇದೆ.

ಯಾವ ಕೋರ್ಸ್‌ಗಳು ಲಭ್ಯ
ಸ್ನಾತಕ (ಯುಜಿ) ಕೋರ್ಸ್‌:
ಬಿ.ಎ, ಬಿ.ಕಾಂ, ಬಿ.ಲಿಬ್‌,ಐ.ಎಸ್‌ಸಿ, ಬಿ.ಬಿಎ, ಬಿಇಡಿ(ಸಿಟಿಟಿ ಮೂಲಕ ಕಾರ್ಯನಿರತ ಶಿಕ್ಷಕರಿಗೆ), ಬಿಎಸ್‌ಸಿ ಹೋಮ್‌ಸೈನ್ಸ್, ಬಿಎಸ್‌ಸಿ ಐಟಿ, ಬಿಸಿಎ.

ಸ್ನಾತಕೋತ್ತರ (ಪಿಜಿ) ಕೋರ್ಸ್‌: ಎಂ.ಎ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಸಂಸ್ಕೃತ, ಶಿಕ್ಷಣ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜ ಶಾಸ್ತ್ರ, ಪ್ರಾಚೀನ ಇತಿಹಾಸ, ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಎಂಬಿಎ, ಎಂ.ಲಿಬ್‌.ಐ.ಎಸ್‌ಸಿ, ಎಂ.ಎಸ್‌.ಸಿ.

ಪಿಜಿ ಸರ್ಟಿಫಿಕೇಟ್‌ ಕೋರ್ಸ್ (ಪದವಿ): ಇಂಗ್ಲೀಷ್, ಕಮ್ಯುನಿಕೇಷನ್ ಇಂಗ್ಲೀಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌, ಮಾರ್ಕೆಟಿಂಗ್, ಮ್ಯಾನೆಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳು, ನ್ಯೂಟ್ರಿಷನ್ ಡಯಟೆಟಿಕ್ಸ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್ಸ್.

ಡಿಪ್ಲೊಮಾ (ಪಿಯುಸಿ): ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್‌ ಹಾಗೂ ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್ಸ್, ಅರ್ಲಿ ಚೈಲ್ಡ್‌ಕೇರ್ ಅಂಡ್ ಎಜುಕೇಷನ್.

ಸರ್ಟಿಫಿಕೇಟ್‌ (ಆರು ತಿಂಗಳು): ಪಂಚಾಯತ್ ರಾಜ್, ನ್ಯೂಟ್ರಿಷನ್ ಹಾಗೂ ಫುಡ್, ಮಾಹಿತಿ ಸಂವಹನ ತಂತ್ರಜ್ಞಾನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು