ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದ್ಧತೆ ಇದ್ದರೆ ಯಶಸ್ಸು ಸಾಧ್ಯ: ಟಿ.ಸುಧಾಕರ್ ಪೈ

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಉದ್ಘಾಟನೆ
Published 16 ಜೂನ್ 2024, 15:40 IST
Last Updated 16 ಜೂನ್ 2024, 15:40 IST
ಅಕ್ಷರ ಗಾತ್ರ

ಉಡುಪಿ: ಯಾವ ಕ್ಷೇತ್ರದಲ್ಲಾದರೂ ಬದ್ಧತೆ, ಸಂಕಲ್ಪ ಹಾಗೂ ಕರ್ತವ್ಯ ಪ್ರಜ್ಞೆ ಇದ್ದರೆ ಯಶಸ್ಸು ಸಾಧ್ಯ ಎಂದು ಮಣಿಪಾಲ್ ಗ್ರೂಪ್‌ನ  ಅಧ್ಯಕ್ಷರಾದ ಟಿ.ಸುಧಾಕರ್ ಪೈ ಹೇಳಿದರು.

ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ ವತಿಯಿಂದ ಮಣಿಪಾಲದ ವಿದ್ಯಾನಗರದಲ್ಲಿ ಆರಂಭಗೊಂಡ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜನ್ನು ಹಾಗೂ ಶಾಂತಿ ರಮೇಶ್ ಪೈ ಓಪನ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅನನ್ಯವಾದುದು. ಮಣಿಪಾಲ ಇಡೀ ವಿಶ್ವದ ಮನಸ್ಸನ್ನು ಗೆಲ್ಲುವಂತೆ ಮಾಡಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಮಣಿಪಾಲ ಜ್ಞಾನಸುಧಾ. ಈಗಾಗಲೇ ಜ್ಞಾನಸುಧಾ  ಶಿಕ್ಷಣ ಸಂಸ್ಥೆ ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಜೀವನದ ಅಡಿಪಾಯವನ್ನು ಒದಗಿಸುತ್ತಿರುವುದು ಗೌರವಾರ್ಹವಾಗಿದೆ ಎಂದರು.  

ಗುಜರಾತ್‌ನ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶಶಿಧರ್ ಶೆಟ್ಟಿ ಮಾತನಾಡಿದರು.  ಉಡುಪಿ ಡಿಡಿಪಿಯು ಮಾರುತಿ,  ಬಳ್ಳಾರಿ ಜ್ಞಾನಾಮೃತ ಪಿ.ಯು. ಕಾಲೇಜಿನ ಅಧ್ಯಕ್ಷ ಎಂ.ಜಿ.ಗೌಡ್,  ಎ.ಪಿ.ಜಿ.ಇ.ಟಿ. ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯ ಗಣಪತಿ ಪೈ,  ಮಣಿಪಾಲ್ ಹೈಸ್ಕೂಲ್‌ನ ಸಂಚಾಲಕ ಪ್ರಕಾಶ್ ಶೆಟ್ಟಿ, ಎಚ್.ಪಿ.ಆರ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಎಂ.ಜೆ.ಸಿ.ಯ ಪ್ರಾಂಶುಪಾಲರಾದ ಡಾ.ರೂಪಾ ಭಟ್,  ಟ್ರಸ್ಟಿ ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್ ಕೊಡವೂರ್, ಉಡುಪಿ ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್  ಪಾಲ್ಗೊಂಡಿದ್ದರು.

ಈ ಸಂದರ್ಭ ಉಡುಪಿ ಜ್ಞಾನಸುಧಾ ಪಿ.ಯು. ಕಾಲೇಜಿನ ಜೆಇಇ ಮೈನ್, ನೀಟ್‌ನ 28 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ, ತಲಾ ಒಂದು ₹1 ಸಾವಿರ  ನೀಡಿ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿನಿ ರೋಶ್ನಿ ಎಂ.ಪಿ. ಅಭಿನಂದನಾ ನುಡಿಗಳನ್ನಾಡಿದರು.

ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ  ಮಣಿಪಾಲ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನಸುಧಾ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಹೊಂದಿದ 75 ಅರ್ಹ ವಿದ್ಯಾರ್ಥಿಗಳಿಗೆ ₹30.98 ಲಕ್ಷ ವಿದ್ಯಾರ್ಥಿವೇತನ ನೀಡಲಾಯಿತು.

ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲಭಾಷಾ ಉಪನ್ಯಾಸಕಿ  ಶಮಿತಾ ಮೂಡುಬೆಳ್ಳೆ ನಿರೂಪಿಸಿದರು. ಮಣಿಪಾಲ್ ಜ್ಞಾನಸುಧಾದ ಪ್ರಾಂಶುಪಾಲ ಗಣೇಶ ಶೆಟ್ಟಿ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT