ಉಡುಪಿ: ತೌತೆ ಚಂಡಮಾರುತದಿಂದ ಜಿಲ್ಲೆಯಲ್ಲಿ ₹ 68.88 ಕೋಟಿ ಹಾನಿ ಅಂದಾಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ವಿದ್ಯುತ್ ಸ್ಪರ್ಶದಿಂದ ಕಾಪುವಿನಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ, ತಾತ್ಕಾಲಿಕ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ನೆರವಿಗೆ ₹ 40,000, ಜಾನುವಾರು ಪ್ರಾಣಹಾನಿಯಿಂದ ₹ 2.38 ಲಕ್ಷ, ಬೋಟ್ ಹಾಗೂ ಮೀನುಗಾರಿಕಾ ನೆಟ್‌ಗೆ ಹಾನಿಯಿಂದ ₹ 9.75 ಲಕ್ಷ, 7 ಮನೆಗಳು ಪೂರ್ಣ ಹಾನಿಯಾಗಿದ್ದು ₹ 53 ಲಕ್ಷ, 76 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ₹ 1.76 ಕೋಟಿ ಹಾನಿ ಸಂಭವಿಸಿದೆ.

2.2 ಕಿ.ಮೀ ರಾಜ್ಯ ಹೆದ್ದಾರಿ ಹಾಳಾಗಿದ್ದು ₹ 2.15 ಕೋಟಿ ಹಾನಿ, 51.4 ಕಿ.ಮೀ ನಗರ ರಸ್ತೆಗಳು ಹಾಳಾಗಿದ್ದು ₹ 1.55 ಕೋಟಿ ಹಾನಿ, 2 ಕಿ.ಮೀ ಮೀನುಗಾರಿಕಾ ರಸ್ತೆಗಳಿಗೆ ಹಾನಿಯಾಗಿದ್ದು ₹ 2.20 ಕೋಟಿ ಹಾನಿ, 8 ಸೇತುವೆಗಳಿಗೆ ಹಾನಿಯಾಗಿದ್ದು ₹ 40 ಲಕ್ಷ ನಷ್ಟ ಅಂದಾಜಿಸಲಾಗಿದೆ.

105 ವಿದ್ಯುತ್ ಕಂಬಗಳು ಮುರಿದಿದ್ದು ₹ 9.5 ಲಕ್ಷ ಹಾನಿ, ₹ 8 ಟ್ರಾನ್ಸ್‌ಫಾರಂಗಳು ಸುಟ್ಟಿದ್ದು ₹ 2.8 ಲಕ್ಷ ಹಾನಿ, ಸರ್ಕಾರಿ ಕಟ್ಟಡಗಳು ಹಾಗೂ ಪ್ರಾಥಮಿಕ ಶಾಲೆಗಳಿಗೆ ಹಾನಿಯಾಗಿದ್ದು ₹ 25 ಲಕ್ಷ ನಷ್ಟವಾಗಿದೆ. 5271 ಮೀಟರ್ ಕಡಲ್ಕೊರೆತದಿಂದ ₹ 59.41 ಕೋಟಿ, ಪಡುಬಿದ್ರಿ ಬ್ಲೂಫ್ಲಾಗ್‌ಗೂ ಹಾನಿಯಾಗಿದ್ದು ₹ 25 ಲಕ್ಷ ಹಾನಿ ಸೇರಿದಂತೆ ₹ 68.88 ಕೋಟಿ ಚಂಡಮಾರುತದ ಪ್ರಭಾವದಿಂದ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.