ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಸಹಯೋಗದಲ್ಲಿ ಇತಿಹಾಸ ವಿಭಾಗದಿಂದ ‘ತುಳುನಾಡಿನ ದೇವಾಲಯ ಸಂಸ್ಕೃತಿ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.

ಮೂಡುಬಿದಿರೆ ಧವಳ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪುಂಡಿಕಾಯಿ ಗಣಪತಿ ಭಟ್ ಮಾತನಾಡಿ, ಡಾ.ಗುರುರಾಜ ಭಟ್ ಮೊದಲ ಬಾರಿಗೆ ತುಳುನಾಡಿನ ದೇವಾಲಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಿದವರು. ತುಳುನಾಡಿನ ದೇವಾಲಯಗಳನ್ನು ಊರಿನ ಜನರೇ ನಿರ್ಮಿಸಿರುವುದರಿಂದ ಮತ್ತು ರಾಜರು ನಿರ್ಮಿಸಿದ ದೇವಾಲಯಗಳು ಬಹಳ ಸೀಮಿತವಾಗಿರುವುದರಿಂದ ವೈಜಾನಿಕ ಅಧ್ಯಯನಕ್ಕೆ ತೊಡಕಾಗಿದೆ. ಐತಿಹಾಸಿಕ ಸ್ಮಾರಕ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಪ್ರಾಂಶುಪಾಲ ವಿದ್ಯಾಧರ ಹೆಗ್ದೆ ಎಸ್. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರವೀಣ ಕುಮಾರ್, ಐಕ್ಯುಎಸಿ ಸಂಚಾಲಕ ಗಣೇಶ ಎಸ್, ಇತಿಹಾಸ ಉಪನ್ಯಾಸಕ ತಂತ್ರಿ ಸ್ವಪ್ನ ಭಾಗವಹಿಸಿದ್ದರು. ಇತಿಹಾಸ ವಿಭಾಗ ಮುಖ್ಯಸ್ಥ ಅರುಣಾಚಲ ಕೆ.ಎಸ್. ಸ್ವಾಗತಿಸಿದರು. ಅಮರ್ ನಿರೂಪಿಸಿದರು. ಶ್ರೀಲತಾ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.