ಗುರುವಾರ , ಅಕ್ಟೋಬರ್ 1, 2020
21 °C

ಉಡುಪಿ: ಬೇಕರಿಯ ಓವನ್ ಸ್ಫೋಟಗೊಂಡು ಮಾಲೀಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸಾಸ್ತಾನ ಸಮೀಪದ ಐರೋಡಿಯಲ್ಲಿ ಸೋಮವಾರ ಬೆಳಿಗ್ಗೆ ಬೇಕರಿಯ ಓವನ್‌ ಸ್ಫೋಟಗೊಂಡು ಮಾಲೀಕ ರಾಬರ್ಟ್ ಪುಟಾರ್ಡೊ (58) ಮೃತಪಟ್ಟಿದ್ದಾರೆ.

ಬೇಕರಿಯಲ್ಲಿದ್ದ ದೊಡ್ಡ ಓವನ್‌ಗೆ ಸಿಲಿಂಡರ್ ಅಳವಡಿಸುವಾಗ ಆಕಸ್ಮಿಕವಾಗಿ ಸ್ಫೋಟವಾಗಿದೆ. ಈ ಸಂದರ್ಭ ಬೇಕರಿಯಲ್ಲಿ ಐವರು ಕೆಲಸಗಾರರು ಇದ್ದರು. ಅವರಲ್ಲಿ ರಮೇಶ್‌ ಎಂಬುವರ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟ ಠಾಣೆ ಪೊಲೀಸರು ಮಾಹಿತಿ ನೀಡಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು