ಉಳ್ಳಾಲ: ಅಬ್ಬಕ್ಕಳಂತೆ ಉಳ್ಳಾಲದ ನಾಡಿಗಾಗಿ ಅವಿರತ ಶ್ರಮವಹಿಸಿದ ಚೆನ್ನಮರಕಾಲ ಹೆಸರಿನಲ್ಲಿ ರಸ್ತೆ, ದ್ವಾರಗಳ ನಿರ್ಮಾಣವಾಗಬೇಕಿದೆ. ಚೆನ್ನಮರಕಾಲರಿಗೆ ಸೂಚಿಸಬೇಕಾದ ಗೌರವ, ಶಾಶ್ವತವಾಗಿ ಉಳಿಯಬೇಕಾದ ಕುರುಹುಗಳ ಕುರಿತು ಮಾರುತಿ ಯುವಕ ಮಂಡಲ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಮಂಗಳೂರಿನ ಸೇಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಹೇಳಿದರು.
ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ವೇದಿಕೆಯಲ್ಲಿ ನಡೆದ ಮೊಗವೀರಪಟ್ನದ ಮಾರುತಿ ಜನ ಸೇವಾ ಸಂಘ, ಮಾರುತಿ ಯುವಕ ಮಂಡಲದ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಗೌರವಧನ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾರುತಿ ಜನಸೇವಾ ಸಂಘದ ಅಧ್ಯಕ್ಷ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಯಶವಂತ್ ವಿ.ಅಮೀನ್, ಉಳ್ಳಾಲ ಪೊಲೀಸ್ ಸಿಪಿಐ ಬಾಲಕೃಷ್ಣ ಎಚ್.ಎನ್., ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಬೊಕ್ಕಪಟ್ನ ಬೆಂಗ್ರೆ, ನಿರೂಪಕಿ ಡಾ.ಪ್ರಿಯಾ ಹರೀಶ್, ಮತ್ಸ್ಯೋದ್ಯಮಿಗಳಾದ ಎಸ್.ಎಂ.ಫಾರೂಕ್, ಸಿಂಧೂರಾಮ್ ಪುತ್ರನ್, ಸೂರಜ್ ಮಂಗಳೂರು, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾದೇಶಿಕ ಸಹಕಾರ ಸಂಘದ ಅಧ್ಯಕ್ಷ ವರದರಾಜ್ ಬಂಗೇರ, ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್, ಗೌರವಾಧ್ಯಕ್ಷ ವರದರಾಜ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಜಿ.ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್.ಬಂಗೇರ, ಜತೆ ಕಾರ್ಯದರ್ಶಿ ಪವನ್ ಉಳ್ಳಾಲ್, ಕೋಶಾಧಿಕಾರಿ ಅನಿಲ್ ಚರಣ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್ ಭಾಗವಹಿಸಿದ್ದರು.
ಮಾರುತಿ ಸಾಧಕ ಪುರಸ್ಕಾರವನ್ನು ಭಾರತೀಯ ಸೇನೆಯ ಕ್ಯಾ.ರಾಜೇಶ್, ಅಂತರರಾಷ್ಟ್ರೀಯ ಪವರ್ ಲಿಫ್ಟರ್ ವಿಜಯ್ ಕಾಂಚನ್, ಪಶ್ಚಿಮ್ ಚಾರಿಟಬಲ್ ಟ್ರಸ್ಟ್‌ನ ರೋಹಿತ್ ಸಾಂಕ್ಟಸ್, ವರ್ಲ್ಡ್ ಸೈನ್ಸ್ ಸ್ಕಾಲರ್ ಹಾಗೂ ಎಪಿಜೆ ಕಲಾಂ ಪುರಸ್ಕಾರ ಪುರಸ್ಕೃತ ಕುಮಾರಿ ಸಿಂಧೂರ ರಾಜ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಚಿನ್ಮಯ್ ಜಿ.ಕೆ., ತುಳು ರಂಗಭೂಮಿ ಕಲಾವಿದ ರಂಜನ್ ಬೋಳೂರು, ಕ್ರಿಕೆಟ್ ಆಟಗಾರ ಕೃತಿನ್ ಕೆ.ಸಾಲ್ಯಾನ್ ಉಳ್ಳಾಲ ಅವರಿಗೆ ಪ್ರದಾನ ಮಾಡಲಾಯಿತು.
ಉಳ್ಳಾಲ ವ್ಯಾಘ್ರ ಚಾಮುಂಡೇ ಶ್ವರಿಯ ಪ್ರಧಾನ ಅರ್ಚಕರು, ಗುರಿ ಕಾರರು ಹಾಗೂ ದೈವ ಚಾಕರಿಯವರನ್ನು ಅಭಿನಂದಿಸ ಲಾಯಿತು.
ಸಮನ್ವಯ ಕೇಂದ್ರ ಲೇಡಿಹಿಲ್ ಮಂಗಳೂರು ಉತ್ತರ ವಲಯ, ಸಿದ್ಧತಾ ಕೇಂದ್ರ ಕಾಟಿಪಳ್ಳದ 33 ಮಕ್ಕಳಿಗೆ ಗಾಲಿ ಕುರ್ಚಿ ಸೇರಿದಂತೆ ₹ 35 ಸಾವಿರ ಮೌಲ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಉಳ್ಳಾಲ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿನ್ಮಯೀ ಪೊಯ್ಯತ್ತಬೈಲ್ ಅವರನ್ನು ಅಭಿನಂದಿಸಲಾಯಿತು.
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಹಸ್ತ ನೀಡಲಾಯಿತು. ಒಟ್ಟು ₹ 10 ಲಕ್ಷ ಮೌಲ್ಯದ ಸವಲತ್ತು ವಿತರಿಸಲಾಯಿತು.
ಆರ್.ಜೆ.ಪ್ರಸನ್ನ ನಿರೂಪಿಸಿದರು. ಪ್ರಶಾಂತ್ ಬಿ.ಉಳ್ಳಾಲ ಸ್ವಾಗತಿಸಿದರು. ಅನಿಲ್ ಚರಣ್ ಪ್ರತಿಭಾ ಪುರಸ್ಕಾರದ ವಿದ್ಯಾರ್ಥಿಗಳ ವಿವರ ಓದಿದರು. ಕಪಿಲ್ ಎಸ್.ಬಂಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.