ಶಿರ್ವ(ಉಡುಪಿ): ಕಾಪು ತಾಲೂಕಿನ ಶಿರ್ವ ಗ್ರಾಮದ ನಡಿಬೆಟ್ಟುವಿನಲ್ಲಿ ಎಳನೀರು ಕೊಯ್ಯುವ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಶಿರ್ವದ ನಡಿಬೆಟ್ಟು ಸಮೀಪದ ಪನಿಯಾರ ಮನೆಯ ಕೆಲಸಗಾರ ಸುರೇಶ್ ಶೆಟ್ಟಿ (68) ಮೃತಪಟ್ಟವರು.
ತೋಟದಲ್ಲಿ ಕಬ್ಬಿಣದ ಸಲಾಕೆಯನ್ನು ಬಳಸಿ ತೆಂಗಿನ ಮರದಿಂದ ಎಳನೀರು ಕೊಯ್ಯುತ್ತಿದ್ದ ವೇಳೆ, ಹೈ ಟೆನ್ಶನ್ ತಂತಿಗೆ ಸುರೇಶ ಅವರ ಕೈಯಲ್ಲಿದ್ದ ಕಬ್ಬಿಣದ ಸಲಾಕೆ ತಾಗಿದೆ. ಇದರಿಂದ ವಿದ್ಯುತ್ ಪ್ರವಹಿಸಿ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಶಿರ್ವ ಠಾಣೆಯ ಪೊಲೀಸರು ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.