ಉಡುಪಿ: ಕೆವೈಸಿ ಅಪ್‌ಡೇಟ್ ಮಾಡಲು ಹೋಗಿ ವಂಚಕರ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ₹3,99,989 ಕಳೆದುಕೊಂಡಿದ್ದಾರೆ. ಡೇವಿಡ್ ಅಶೋಕ್ ರೋಡ್ರಿಗಸ್ ಹಣ ಕಳೆದುಕೊಂಡವರು.
ಈಚೆಗೆ ಡೇವಿಡ್ ಮೊಬೈಲ್‌ಗೆ ಕೆವೈಸಿ ಅಪ್‌ಡೇಟ್ ಮಾಡುವಂತೆ ಸಂದೇಶ ಬಂದಿದ್ದು ಬ್ಯಾಂಕ್ ಅಧಿಕಾರಿಗಳೇ ಕಳಿಸಿರಬಹುದು ಎಂದು ನಂಬಿ ಸಂದೇಶ ಕಳಿಸಿದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ಮುಖ್ಯ ಕಚೇರಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿ ವಂಚಕ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಖಾತೆ ಬ್ಲಾಕ್ ಆಗುತ್ತದೆ ಎಂದು ಹೆದರಿಸಿ 4 ಬಾರಿ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಕ್ರಮವಾಗಿ ₹99,999, ₹99,999, ₹99,997, ₹99,994 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.