ಉಡುಪಿ: ಪ್ರಿಯಕರನ ಭೇಟಿಗೆ ಹೋಗುತ್ತಿದ್ದಾಳೆ ಎಂದು ಸಿಟ್ಟಾದ ತಾಯಿ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾದ ಘಟನೆ ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ನಡೆದಿದೆ.

ಶಿಫಾನಾಜ್ ಕೊಲೆಯಾದ ಯುವತಿ. ಈಕೆಯ ತಾಯಿ ಗುಲ್ಜಾರ್ ಬಾನು (45)ರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

‘ಮರ್ಯಾದೆ ತೆಗೆಯುತ್ತೀಯಾ ಎಂದು ಸೆ.20ರಂದು ಶಿಫಾನಾಜ್ಳ ಕುತ್ತಿಗೆ ಒತ್ತಿ ಹಿಡಿದು ಕೊಲೆ ಮಾಡಿದ್ದಾಳೆ’ ಎಂದು ಶಿಫಾನಾಜ್ ತಂದೆ ಶೇಖ್ ಮುಸ್ತಫಾ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶಿಫಾನಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಈ ಹಿಂದೆ ತಾಯಿ ಗುಲ್ಜಾರ್ ಬಾನು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.