ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ : ಕಾಲೇಜುಗಳಿಗೆ ಶೇ100ರ ಗರಿ

Last Updated 14 ಜುಲೈ 2020, 15:35 IST
ಅಕ್ಷರ ಗಾತ್ರ

ಕಾರ್ಕಳ : ನಗರದ ಕ್ರೈಸ್ಟ್‌ಕಿಂಗ್ ಹಾಗೂ ಸಾಣೂರಿನ ಪ್ರಕೃತಿ ಪದವಿ ಪೂರ್ವ ಕಾಲೇಜುಗಳು ಶೇಕಡ 100 ಫಲಿತಾಂಶ ದಾಖಲಿಸಿವೆ.

ಕ್ರೈಸ್ಟ್‌ಕಿಂಗ್ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 140 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ವಿಜ್ಞಾನ ವಿಭಾಗದ 72 ವಿದ್ಯಾರ್ಥಿಗಳಲ್ಲಿ 39ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, ಉಳಿದವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದ 68ವಿದ್ಯಾರ್ಥಿಗಳಲ್ಲಿ 35 ಮಂದಿ ವಿಶಿಷ್ಟ ಶ್ರೇಣಿ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ಅರುಣ್ ಫ್ರಾನಿಸ್ಸ್ ಟೆಲ್ಲಿಸ್ 575, ಅಲ್ವಿನ್ ಡಿಸೋಜ 571, ವಾಣಿಜ್ಯ ವಿಭಾಗದ ಸುರಾಕ್ಷ ಎಸ್. ರೈ 579, ಮೆಲಿಟಾ ಸಿಸಿಲಿಯಾ ಸಿಕ್ವೇರಾ 577 ಅಂಕಗಳನ್ನು ಪಡೆದಿದ್ದಾರೆ.

ಪ್ರಕೃತಿ ಕಾಲೂಜು: ಸಾಣೂರು ಪ್ರಕೃತಿ ಪದವಿ ಪೂರ್ವ ಕಾಲೇಜು ತನ್ನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಶೇಕಡ 100 ಫಲಿತಾಂಶ ಪಡೆದಿದೆ.

ನಿಟ್ಟೆ ಕಾಲೇಜು: ನಿಟ್ಟೆ ಡಾ.ಎನ್.ಎಸ್.ಎ.ಎಂ.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ 99 ಫಲಿತಾಂಶವನ್ನು ಗಳಿಸಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 180 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿಜ್ಞಾನ ವಿಭಾಗದ 79 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೆ, ವಾಣಿಜ್ಯ ವಿಭಾಗದ 101ಮಂದಿಯಲ್ಲಿ 43ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಮಂಜೂಷಾ 590, ಪ್ರe ಎಸ್.ಪಿ 583 ಅಂಕ ಗಳಿಸಿದರೆ ವಿಜ್ಞಾನ ವಿಭಾಗದ ಅಮಿತ್ ಜಗನ್ನಾಥ್ ಸೂರಿಂಜೆ 575ಹಾಗೂ ಅಮೃತಾ ಪ್ರಭು 574ಅಂಕ ಗಳಿಸಿದ್ದಾರೆ.

ಜ್ಷಾನಸುಧಾ: ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ಎಲ್ಲರೂ ತೇರ್ಗಡೆಗೊಂಡು ಶೇ 100 ಹಾಗೂ ಒಟ್ಟು ಫಲಿತಾಂಶ ಶೇ 99.8 ಪಡೆದಿದೆ. ಸಂಸ್ಥೆಯ ವಿಜ್ಞಾನ ವಿಭಾಗದ ಜಾಗೃತಿ ಕೆ. ಜೆ. 591, ಸಾತ್ವಿಕ ಶೆಣೈ 589, ವಾಣಿಜ್ಯ ವಿಭಾಗದ ಬಿ.ರಿತಿಕಾ ಕಾಮತ್-594, ರಕ್ಷಿತಾ 592 ಅಂಕ ಗಳಿಸಿದ್ದಾರೆ.

ಎಸ್‌ಎನ್‌ವಿ: ಹಿರಿಯಂಗಡಿಯ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಶೇ 98.29 ಫಲಿತಾಂಶ ಗಳಿಸಿದ್ದು ಒಟ್ಟು 117 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 33 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 73ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿನಿ ಭುವನ ಶೆಣೈ ಹಾಗೂ ಸಾಕ್ಷಿ 600 ಅಂಕಗಳಿಗೆ 582ಅಂಕಗಳಿಸಿದ್ದಾರೆ.

ಭುವನೇಂದ್ರ: ಇಲ್ಲಿಯ ಭುವನೇಂದ್ರ ಕಾಲೇಜಿಗೆ ಶೇ95,03 ಫಲಿತಾಂಶ ಬಂದಿದ್ದು ಪರೀಕ್ಷೆಗೆ 342ವಿದ್ಯಾರ್ಥಿಗಳು ಹಾಜಾರಾಗಿದ್ದು325 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ 94 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 184ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅರೋನ್ ಡಿಸೋಜ 587, ವಾಣಿಜ್ಯ ವಿಭಾಗದ ನೇಹಾ ನಾಯಕ್ 586 ಹಾಗೂ ಕಲಾ ವಿಭಾಗದ ಸುಜಿತ್ ಎಚ್.ವಿ 542 ಅಂಕಗಳಿಸಿದ್ದಾರೆ.

ಎಸ್.ವಿ.ಟಿ.: ನಗರದ ಎಸ್.ವಿ.ಟಿ. ವನಿತಾ ಪ.ಪೂ ಕಾಲೇಜಿಗೆ ಶೇ 89.65ರಷ್ಟು ಫಲಿತಾಂಶ ಬಂದಿದ್ದು, ವಾಣಿಜ್ಯ ವಿಭಾಗದಲ್ಲಿ 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT