ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುವ ಹವ್ಯಾಸದಿಂದ ಸೃಜನಶೀಲತೆ ವೃದ್ಧಿ

ಕೋಟ: ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಅವನಿ ಉಪಾಧ್ಯ
Last Updated 7 ಡಿಸೆಂಬರ್ 2022, 5:48 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ‘ಯುವ ಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸೃಜನಶೀಲತೆ ಬೆಳೆಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಓದುವ, ಬರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮದ ಅಧ್ಯಕ್ಷೆ, ಪೆರ್ವಾಜೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅವನಿ ಉಪಾಧ್ಯ ಹೇಳಿದರು.

ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಮಂಗಳವಾರ ಸಾಲಿಗ್ರಾಮದ ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ, ಕೋಟ ವಿದ್ಯಾಸಂಸ್ಥೆ ಆಶ್ರಯದಲ್ಲಿ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾ ಘಟಕ ಸಹಕಾರದಲ್ಲಿ ನಡೆದ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಕಿರಿಂಜೇಶ್ವರದ ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಮಥ್ ಕಾರ್ಯಕ್ರಮ ಉದ್ಘಾಟಿಸಿ, ಮೊಬೈಲ್‌ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ಯುವಜನಾಂಗವನ್ನು ಹೊಸ ಲೋಕಕ್ಕೆ ತರಲು ಸಾಹಿತ್ಯ ಪೂರಕವಾಗಿದೆ. ಹಿರಿಯರು ತಮ್ಮ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದರು.

ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ.ನಿ.ವಿಜಯ ಬಲ್ಲಾಳ್, ಕೋಟ ವಿದ್ಯಾಸಂಘದ ಖಜಾಂಚಿ ವೆಲೇರಿಯನ್ ಮೆನೇಜಸ್, ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಭಾಸ್ಕರ ಆಚಾರ್ಯ, ಕಾರ್ಯಕ್ರಮದ ಸಂಘಟಕ ಮಕ್ಕಳ ಸಾಹಿತ್ಯ ವೇದಿಕೆಯ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇದ್ದರು. ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿದರು. ಮನೋಹರ್‌ ಭಟ್‌ ವಂದಿಸಿದರು. ಭಾಗ್ಯಶ್ರೀ ನಿರೂಪಿಸಿದರು.

ಗಮನಸೆಳೆದ ಮಕ್ಕಳ ಗೋಷ್ಠಿಗಳು

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಗಾಯನಗೋಷ್ಠಿ , ಕಥಾಗೋಷ್ಠಿ ನಡೆಯಿತು. ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳಾದ ಉನ್ನತಿ ಕೋಟ, ನಿವೇದಿತ ಚಿತ್ರಪಾಡಿ, ಧನುಷ್ ಚಿತ್ರಪಾಡಿ, ವೈಷ್ಣವಿ ಗೋಳಿಯಂಗಡಿ, ಎಚ್.ವಿಧಾತ್ರೀ ಸಿದ್ಧಾಪುರ, ಮಾನಸ ಜಿ. ಕೋಟ, ಹರ್ಷಿತ್ ಮುದ್ರಾಡಿ, ಚಿರಾಗ್ ಹೆಬ್ರಿ, ಧಾರಿಣಿ ಪೆರ್ವಾಜೆ, ಸುದೀಪ್ ಬಸ್ರೂರು, ದೀಕ್ಷಿತಾ ತೆಕ್ಕಟ್ಟೆ ಕವಿಗೋಷ್ಠಿ ಯಲ್ಲಿ ಭಾಗವಹಿಸಿದ್ದರು.

ರಿಷಿಕಾ ಹಟ್ಟಿಯಂಗಡಿ, ನಂದಿನಿ ಗುಂಡ್ಮಿ, ಶ್ರೀನಿಧಿ ಕಾರ್ಕಡ, ವಾರುಣಿ ಕೋಟ, ಶರ್ಮದ ಕೋಟ, ನಿಧೀಶ್‌ ಕೋಟ, ಶ್ರೀವತ್ಸ ಹಟ್ಟಿಯಂಗಡಿ, ರೋಷನ್ ಕುಂದಾಪುರ, ಭಾಗ್ಯಶ್ರೀ ಕೋಟ ಗಾಯನಗೋಷ್ಠಿಯಲ್ಲಿ ಹಾಗೂ ಆದಿತ್ಯ ಗೋಳಿಯಂಗಡಿ, ಅನುಶ್ರೀ ಕೋಟ, ಅಮೃತ ಚಿತ್ರಪಾಡಿ, ಆರ್‍ಯ ಚಿತ್ರಪಾಡಿ, ಪ್ರಿಯ ಕಾರ್ಕಡ, ಅನನ್ಯ ನಾಯಕ್ ನಾಲ್ಕೂರು, ಆದಿತ್ಯ ನಾಯಕ್ ನಾಲ್ಕೂರು, ಶ್ರೇಯಾ ಕೋಟ, ಭೂಮಿ ಕೋಟ, ಪ್ರಥ್ವೀ ಗೋಳಿಯಂಗಡಿ, ನಿಶಾ ಗೋಳಿಯಂಗಡಿ, ರಚಿತಾ ಕುಲಾಲ್ ಮುದ್ರಾಡಿ, ಪ್ರಣಾಮ್ ಹೆಬ್ರಿ, ಸಿದ್ಧಿರಾಜ್ ಕಾರ್ಕಳ, ಶೋಭಿತ್, ಸಾಂಜಲಿ ಬಜಗೋಳಿ, ಅನಘ ಕೋಟ, ಆದ್ಯಾ ತೆಕ್ಕಟ್ಟೆ, ನಿಧಿ ತೆಕ್ಕಟ್ಟೆ, ಮಾನಸ ಗೋಳಿಯಂಗಡಿ ಗೋಷ್ಠಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT