ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ವಿವಿಧೆಡೆ ವರಮಹಾಲಕ್ಷ್ಮಿ ವ್ರತ: ಲಕ್ಷ್ಮಿಯ ಸಾಮೂಹಿಕ ಉಪಾಸನೆ

Published 17 ಆಗಸ್ಟ್ 2024, 6:07 IST
Last Updated 17 ಆಗಸ್ಟ್ 2024, 6:07 IST
ಅಕ್ಷರ ಗಾತ್ರ

ಉಡುಪಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ವರ ಮಹಾಲಕ್ಷ್ಮಿ ಪೂಜೆ ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ವ್ರತ ಆಚರಿಸಿದ್ದ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಭಜನಾ ಮಂದಿರ, ದೇವಾಲಯ, ಸಭಾಭವನಗಳಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಕೆಲವು ದೇವಿ ದೇವಾಲಯಗಳನ್ನೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪೂಜೆಯ ಅಂಗವಾಗಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಮಹಿಳೆಯರು ಪೂಜೆ ಸಲ್ಲಿಸಿದರು.‌

ವ್ರತಾಚರಣೆ

ಹೆಬ್ರಿ: ಮುನಿಯಾಲು ಜಿಎಸ್‌ಬಿ ಮಹಿಳಾ ಮಂಡಳಿಯ 34ನೇ ವರ್ಷದ ವರಮಹಾಲಕ್ಷ್ಮಿ ವ್ರತ ಆಚರಣೆ ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.

ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಗಣಪತಿ ಪೈ ಮುದ್ರಾಡಿ, ಉಪಾಧ್ಯಕ್ಷೆ ಲತಾ ದಾಮೋದರ್ ಪೈ, ಕೋಶಾಧಿಕಾರಿ ಮಹಾಲಸ ಕೃಷ್ಣಕಾಂತ ನಾಯಕ್, ಕಾರ್ಯದರ್ಶಿ ರಜನಿ ರಾಮ್ ಪೈ ನೇತೃತ್ವದಲ್ಲಿ ಸಮಾಜದ 200ಕ್ಕೂ ಮಿಕ್ಕಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಅದ್ಧೂರಿಯಾಗಿ ನೆರವೇರಿತು. ಪೂಜಾ ವಿಧಿವಿಧಾನಗಳನ್ನು ಪ್ರಧಾನ ಅರ್ಚಕ ವಾಮನ್ ಭಟ್ ನೆರವೇರಿಸಿದರು.

ಅಮೃತಭಾರತಿ ಶಿಕ್ಷಣ ಸಂಸ್ಥೆ: ಹೆಬ್ರಿ ಪಿಆರ್‌ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಿಸಲಾಯಿತು. ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಸತೀಶ್ ಪೈ, ಶೈಲೇಶ್ ಕಿಣಿ, ಗುರುದಾಸ ಶೆಣೈ, ಮಾತೃ ಮಂಡಳಿಯ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕಿ ಮೀನಾಕ್ಷಿ, ಸಂಸ್ಥೆಯ ಮುಖ್ಯಸ್ಥ ಅರುಣ್ ಕುಮಾರ್, ಅಪರ್ಣಾ ಆಚಾರ್, ಅನಿತಾ, ಶಕುಂತಲಾ, ಸಂಸ್ಥೆಯ ಮೇಲ್ವಿಚಾರಕ ರಾಘವೇಂದ್ರ ಇದ್ದರು.

ಗಿಡ ವಿತರಣೆ

ಹೆಬ್ರಿ: ಮುನಿಯಾಲು ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಫಲೋದ್ಯಾನದ ಅಂಗವಾಗಿ ಶ್ರೀಮದ್ ಸುಕ್ರತೀಂದ್ರ ಚಾರಿಟಬಲ್ ಟ್ರಸ್ಟ್ ಮಂಗಳೂರು ವತಿಯಿಂದ ವರಮಹಾಲಕ್ಷ್ಮಿ ಹಬ್ಬದಂದು ಸಮಾಜ ಭಾಂದವರಿಗೆ ಗಿಡಗಳನ್ನು ವಿತರಿಸಲಾಯಿತು.

ವರಮಹಾಲಕ್ಷ್ಮಿ ಪೂಜೆ

ಬೈಂದೂರು: ನಾಯ್ಕನಕಟ್ಟೆ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಸೇವಾ ಸಮಿತಿ ವತಿಯಿಂದ 11ನೇ ವರ್ಷದ ವರಮಹಾಲಕ್ಷ್ಮಿ ವೃತ ಪೂಜೆ ಸಂಪನ್ನಗೊಂಡಿತು. ಅವಧಾನಿ ಗಣೇಶ ಭಟ್, ದೇವತಾ ಪಾರ್ಥನೆ ನಡೆಸಿದರು. ಬಳಿಕ ಸೇವಾಕರ್ತ ಬೈಲ್‌ಕೆರೆ ಗೋಪಾಲ ಪೈ ದಂಪತಿಗಳಿಂದ ಕಲಶ ಸ್ಥಾಪನೆ ಮಾಡಿಸಿ, ಕಲ್ಪೋಕ್ತ ಪೂಜೆ, ಕುಂಕುಮಾರ್ಚನೆ, ಪುಣ್ಯಕಥಾ ಶ್ರವಣ ವಿಧಿವತ್ತಾಗಿ ನೆರವೇರಿಸಿದರು. ಭಜನೆ, ಮಹಾ ಮಂಗಳಾರತಿ, ಅರಶಿನ ಕುಂಕುಮ ಲಕ್ಷ್ಮಿದಾರ ವಿತರಿಸಲಾಯಿತು. ಸಂಜೆ ಭಜನೆ, ಬಳಿಕ ಕಲಶ ವಿಸರ್ಜಿಸಲಾಯಿತು. ಅರ್ಚಕ ಬಾಲಕೃಷ್ಣ ಭಟ್, ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ಶ್ರೀಶ ಭಟ್, ಜತೆ ಕಾರ್ಯದರ್ಶಿ ಗಣೇಶ ಪೈ, ವರಮಹಾಲಕ್ಷ್ಮಿ ಸೇವಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಎನ್. ಶ್ಯಾನುಭಾಗ್, ಉಪಾಧ್ಯಕ್ಷೆ ವಿದ್ಯಾ ಯು. ಭಟ್, ಕಾರ್ಯದರ್ಶಿ ಶ್ಯಾಮಲಾ ಕಿಣಿ, ಉಪಕಾರ್ಯದರ್ಶಿ ಪ್ರಿಯಾ ಗಣೇಶ್ ಪ್ರಭು, ಖಜಾಂಚಿ ಚಂದ್ರಕಲಾ ಕಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT