ಪಡುಬಿದ್ರಿ: ಪರಿಸರವು ನಮ್ಮ ಆಯ್ಕೆ ಅಲ್ಲ, ಜವಾಬ್ದಾರಿ ಎಂಬುದನ್ನು ವಿಶ್ವ ಪರಿಸರ ದಿನ ನೆನಪಿಸುತ್ತದೆ. ಇಂದು ಗಿಡ ನೆಟ್ಟರೆ ನಮ್ಮ ಭವಿಷ್ಯ ಹಸಿರಾಗಿ ಉಜ್ವಲವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅನ್ಸರ್ ಅಹಮದ್ ಹೇಳಿದರು.

ಅವರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾಪು ತಾಲ್ಲೂಕು ಘಟಕ ಅಧ್ಯಕ್ಷ ಚೇತನ್ ಪಡುಬಿದ್ರಿ ನೇತೃತ್ವದಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಪೋಲಿಸ್ ಸಿಬ್ಬಂದಿ ಹೇಮರಾಜ್, ಕೆ. ಪ್ರಕಾಶ್ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಚೇತನ್ ಪಡುಬಿದ್ರಿ, ಅನೀಫ್ ಕಾರ್ಕಳ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಸೈಯ್ಯದ್ ನಿಜಾಮುದ್ದೀನ್ ಪಡುಬಿದ್ರಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಶೇರಿಗಾರ್, ಕಿರಣ ಪ್ರತಾಪ್, ಮೋಹಿನಿ, ಕಾರ್ಯದರ್ಶಿ ಶಶಿಕಲಾ, ಪದಾಧಿಕಾರಿಗಳಾದ ಪ್ರಶಾಂತ್ ಸಾಲ್ಯಾನ್, ಶಾಹಿಲ್ ರಹಮತುಲ್ಲಾ, ಮಹಮ್ಮದ್ ನಿಯಾಜ್ ಭಾಗವಹಿಸಿದ್ದರು. ಸಂತೋಷ್ ಪಡುಬಿದ್ರಿ ನಿರೂಪಿಸಿದರು. ಪ್ರಶಾಂತ್ ಸಾಲ್ಯಾನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.