ಮಂಗಳವಾರ, ಮೇ 26, 2020
27 °C

ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಯಕ್ಷಗಾನದ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕುಂದಾಪುರದ ಕುಂಭಾಶಿಯ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಾಕಿರುವ ಯಕ್ಷಗಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

‘ಯಾರೇ ನೀನು ಭುವನ ಮೋಹಿನಿ’ ಎಂಬ ಹಾಡಿಗೆ ಅಶ್ವಿನಿ ಹಾಗೂ ತಮ್ಮ ಶ್ರೀಚರಣ ಹೆಜ್ಜೆಹಾಕಿದ್ದಾರೆ. ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು ಮೆಚ್ಚುಗೆ ಸೂಚಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಯಕ್ಷಗಾನದ ರಸದೌತಣ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. 

‘ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಒಂದೇ ಒಂದು ಚಟ ಅದು ಕಲೆ; ಯಾವ ಕೊರೊನಾಕ್ಕೂ ಈ ಚಟವನ್ನು ತಪ್ಪಿಸಲಾಗದು, ನನ್ನೊಂದಿಗೆ ನನ್ನ ತಮ್ಮ ಶ್ರೀಚರಣನೂ ಜತೆಯಾಗಿದ್ದಾನೆ, ನೋಡಿ ಸದ್ಯಕ್ಕೆ ಇಷ್ಟೆ ಸಾದ್ಯ’ ಎಂಬ ಒಕ್ಕಣೆಯೊಂದಿಗೆ ಹಾಕಿರುವ ವಿಡಿಯೋ ಜಾಲತಾಣಿಗರ ಮನ ಗೆದ್ದಿದೆ. ಅಶ್ವಿನಿ ಕೊಂಡದಕುಳಿ ಖ್ಯಾತ ಯಕ್ಷಗಾನ ಕಲಾವಿದರಾದ ರಾಮಚಂದ್ರ ಕೊಂಡದಕುಳಿ ಅವರ ಪುತ್ರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು