ಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ, ಕೃಷಿಕ ಫ್ರಾನ್ಸಿಸ್ ಡಿಸೋಜ ಮಲ್ಲಿಗೆ ಗಿಡಗಳ ಆಯ್ಕೆ, ನಾಟಿ, ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ದೇವೇಂದ್ರ ಕಾಮತ್ ಉದ್ಘಾಟಿಸಿದರು. ಮಲ್ಲಿಗೆ ಕೃಷಿಕ ವಿಠಲ, ಯೋಜನೆ ಮೇಲ್ವಿಚಾರಕಿ ಸುಮಲತಾ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ, ಸೇವಾ ಪ್ರತಿನಿಧಿ ಹೇಮಾ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇದ್ದರು.