ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಮುಖ್ಯವಲ್ಲ; ಜನಸೇವೆ ಮುಖ್ಯ

ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ
Last Updated 2 ಮಾರ್ಚ್ 2021, 5:03 IST
ಅಕ್ಷರ ಗಾತ್ರ

ಕಾರ್ಕಳ: ‘ಎಲ್ಲಿ ದೇಶದ ಬಡವರು ಕಷ್ಟಪಡುವರೋ, ಅಲ್ಲಿಯ ತನಕ ಕಾಂಗ್ರೆಸ್ ಕಷ್ಟದಲ್ಲಿರುತ್ತದೆ. ಅಧಿಕಾರ ಮುಖ್ಯವಲ್ಲ, ಜನಸೇವೆ ಮುಖ್ಯ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಟ್ಟಕಡೆಯ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದಾಗ ಸರ್ಕಾರ ಯಶಸ್ವಿಯಾಗುತ್ತದೆ. ಮನೆಯಿಲ್ಲದವರಿಗೆ ಮನೆ, ಪ್ರತಿ ಹಳ್ಳಿಗೊಂದು ಪ್ರಾಥಮಿಕ ಶಾಲೆ, 10 ಕಿ.ಮೀ.ಗೊಂದು ಪ್ರೌಢಶಾಲೆ, 15 ಕಿ.ಮೀ.ಗೊಂದು ಜ್ಯೂನಿಯರ್ ಕಾಲೇಜು, ಗ್ರಾಮಕ್ಕೊಂದು ಆಸ್ಪತ್ರೆ, ನೂರಕ್ಕೂ ಅಧಿಕ ಡಾಂಬರು ರಸ್ತೆ ಇವೆಲ್ಲ ಮಾಡಿದ ಕಾರಣ, ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಲು ಸಾಧ್ಯವಾಯಿತು. ಜಿಲ್ಲೆಗೆ ಎಂಆರ್‌ಪಿಎಲ್ ಕೈಗಾರಿಕೆ ತಂದು ಪರಿಣಾಮ, ನೂರಾರು ಮಂದಿಗೆ ಉದ್ಯೋಗ ದೊರೆಯುವಂತಾಗಿದೆ. ಈ ಕೈಗಾರಿಕೆ ನೀಡಿದ ₹ 32 ಕೋಟಿಯಿಂದ ಮಂಗಳೂರಿನ ಲೆಡಿಗೋಷನ್ ಆಸ್ಪತ್ರೆಯ ನವೀಕರಣ ಮಾಡಲಾಯಿತು’ಎಂದರು.
‘2023ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇ
ಬೇಕು. ಕಾರ್ಯಕರ್ತರ ಸಾಮರ್ಥ್ಯ
ದಿಂದಲೇ ಚುನಾವಣೆ ಎದುರಿಸಬೇಕು. ನಾಯಕರು ಮೊದಲು ಜನರ ಪ್ರೀತಿ
ಸಂಪಾದಿಸಬೇಕು. ಆಕ್ರಮಣ ಎದುರಿ
ಸುವ ಶಕ್ತಿ ನಾಯಕರಿಗೆ ಬಂದಾಗಲೇ, ಪಕ್ಷಕ್ಕೂ ಶಕ್ತಿ ಬರುತ್ತದೆ. ರಾಜ್ಯ, ಕೇಂದ್ರ ಸರ್ಕಾರಗಳ ಶಾಸಕರ ದೌರ್ಜನ್ಯ ಎದುರಿಸಬೇಕು’ ಎಂದು ಹೇಳಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ‘ಯುವಕರಿಗೆ ಕಾಂಗ್ರೆಸ್‌ನ ಸಿದ್ಧಾಂತ, ಬಲಿದಾನ, ತ್ಯಾಗ ತಿಳಿಯಬೇಕು. ಪ್ರತಿಯೊಬ್ಬನಿಗೂ ಪ್ರಶ್ನಿಸುವ ಹಕ್ಕಿದೆ ಎಂಬ ಪ್ರಜಾಪ್ರಭು
ತ್ವದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳ
ಬೇಕು’ ಎಂದರು. ಅಶೋಕ ಕುಮಾರ್ ಕೊಡವೂರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಇನ್ನಾ ದೀಪಕ್ ಕೋಟ್ಯಾನ್, ಹೆಬ್ರಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಯೋಗೀಶ್, ದೀಪಕ ಶೆಟ್ಟಿ, ಎನ್‌ಎಸ್‌ಯುಐ ಘಟಕದ ಅಧ್ಯಕ್ಷ ಸೌರವ ಬಲ್ಲಾಳ್ ಅವರನ್ನು ಅಭಿನಂದಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ್ ಶೆಟ್ಟಿ, ಪ್ರಮುಖರಾದ ರವಿಶಂಕರ ಶೇರಿಗಾರ್, ಕುಶಲ ಶೆಟ್ಟಿ ಉಪಸ್ಥಿತರಿದ್ದರು. ವಕ್ತಾರ ಬಿಪಿನಚಂದ್ರಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಸ್ವಾಗತಿಸಿದರು. ಸುಶಾಂತ ಸುಧಾಕರ ನಿರೂಪಿಸಿದರು. ಪ್ರಭಾಕರ ಬಂಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT